Advertisement

54.22 ಲಕ್ಷ ರೂ. ನಗದು ,4.46 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

12:30 AM Mar 16, 2019 | Team Udayavani |

 ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 54.22 ಲಕ್ಷ ರೂ. ನಗದು ಹಾಗೂ 4.46 ಕೋಟಿ ರೂ. ಮೌಲ್ಯದ 1.11 ಕೋಟಿ ಲೀಟರ್‌ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ಇದೇ ವೇಳೆ 10,777 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಸಿಆರ್‌ಪಿಸಿ ಅಡಿ 2,236 ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದ್ದು, 2,503 ವ್ಯಕ್ತಿಗಳಿಂದ ಮುಚ್ಚಳಿಕೆ ಬರೆದುಕೊಳ್ಳಲಾಗಿದೆ. 1,817 ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಮಾಹಿತಿ ನೀಡಿದ್ದಾರೆ.

Advertisement

2.25 ಲಕ್ಷ ರೂ. ಮದ್ಯ ಜಪ್ತಿ: ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಸೂಕ್ತ ದಾಖಲೆಗಳು ಇಲ್ಲದೇ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 2.25 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ. ಚಿಂತಾಮಣಿಯ ಶ್ರೀನಿಧಿ ಬಾರ್‌ ಮೇಲೆ ದಾಳಿ ನಡೆಸಿ 342 ಲೀ. ಇಎಂಎಲ್‌ ಮದ್ಯ ಹಾಗೂ 314 ಲೀ. ಬಿಯರ್‌ ಬಾಟಲುಗಳನ್ನು ವಶಪಡಿಸಿಕೊಂಡು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಹಣ ವಶ: ದಾಖಲೆಯಿಲ್ಲದೆ ಕೊಂಡೊಯ್ಯಲಾಗುತ್ತಿದ್ದ 50 ಲಕ್ಷ ರೂ. ಗಳನ್ನು ಚುನಾವಣಾ ಧಿಕಾರಿಗಳು ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ವಶ ಪಡಿಸಿಕೊಂಡಿದ್ದಾರೆ. ಅಹ್ಮದ್‌ ನಗರ ಚೆಕ್‌ಪೋಸ್ಟ್‌ ನಲ್ಲಿ ವಾಹನತಪಾಸಣೆ ಮಾಡುತ್ತಿದ್ದ ವೇಳೆ ಈ ಹಣ ಪತ್ತೆಯಾಗಿದೆ. ಇನ್ನು ಮೈಸೂರು-ಹುಣಸೂರು ಹೆದ್ದಾರಿಯ ತಾಲೂಕಿನ ಮನುಗನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.94 ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next