ಬೆಳಗಾವಿ: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಸೋಮವಾರ ಕೇವಲ 54 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜತೆಗೆ 90 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಸೋಮವಾರ ಮತ್ತೆ ಮೂವರು ಕೋವಿಡ್ ಗೆ ಬಲಿಯಾಗಿದ್ದಾರೆ. ಸವದತ್ತಿಯ 41 ವರ್ಷದ ವ್ಯಕ್ತಿ, ಬೆಳಗಾವಿಯ 57 ವರ್ಷದ ವ್ಯಕ್ತಿ ಹಾಗೂ ಬೆಳಗಾವಿಯ 51 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಒಟ್ಟು 94 ಜನ ಬಲಿಯಾದಂತಾಗಿದೆ.
ಹೊಸ 54 ಹೊಸ ಪ್ರಕರಣಗಳಿಂದ 5463 ಸೋಂಕಿತರು ಆಗಿದ್ದು, ಸೋಮವಾರ ಒಂದೇ ದಿನ 90 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಇಲ್ಲಿಯವರೆಗೆ 2194 ಜನ ಬಿಡುಗಡೆ ಆದಂತಾಗಿದೆ. ಇನ್ನೂ 317 ಜನರ ವರದಿ ಬರುವುದು ಬಾಕಿ ಇದೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡ್‌ನಲ್ಲಿ ಸದ್ಯ 3172 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 46559 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 8371 ಜನರು 14 ದಿನಗಳ ಕಾಲ ಗƒಹ ನಿಗಾದಲ್ಲಿದ್ದರೆ, ಒಟ್ಟು 8940 ಜನರು 14 ದಿನಗಳ ಗƒಹ ನಿಗಾ ಪೂರ್ಣಗೊಳಿಸಿದ್ದರೆ, 26076 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ.
ಇಂದಿನವರೆಗೆ 45755 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 39175 ವರದಿ ನಕಾರಾತ್ಮಕವಾಗಿದೆ. 317 ಜನರ ವರದಿಗಾಗಿ ಕಾಯಲಾಗುತ್ತಿದೆ. ಸೋಂಕಿನಿಂದ ಒಟ್ಟು 97 ಜನ ಬಲಿಯಾದಂತಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ