Advertisement

53 ಸಾವಿರ ಅನಧಿಕೃತ ಧ್ವನಿವರ್ಧಕಗಳ ತೆರವು

11:36 AM May 02, 2022 | Team Udayavani |

ನವದೆಹಲಿ: ಉತ್ತರ ಪ್ರದೇಶದಾದ್ಯಂತ ಧಾರ್ಮಿಕ ಸ್ಥಳಗಳಲ್ಲಿದ್ದ 53,942 ಅನಧಿಕೃತ ಧ್ವನಿವರ್ದಕಗಳನ್ನು ತೆರವುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಏ. 25ರಿಂದ ಕೈಗೊಳ್ಳಲಾಗಿದ್ದ ಈ ಕಾರ್ಯಾಚರಣೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸರ್ಕಾರದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ 60,000 ಧ್ವನಿವರ್ದಕಗಳಿಂದ ಹೊರಹೊಮ್ಮುವ ಶಬ್ದವನ್ನು ಪರೀಕ್ಷಿಸಿ, ಅವುಗಳ ಅಬ್ಬರದ ಮಿತಿಯನ್ನು ತಜ್ಞರು ವಿಧಿಸಿರುವ ಮಿತಿಗೆ ತಗ್ಗಿಸಲಾಗಿದೆ ಎಂದು ಪ್ರಶಾಂತ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ಧಾರ್ಮಿಕ ಸಂಸ್ಥೆಗೆ ತಾರತಮ್ಯ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇಗುಲ- ಮಸೀದಿಯ “ಭಾತೃಪ್ರೇಮ’
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪರಸ್ಪರ 50 ಮೀಟರ್‌ನಷ್ಟು ಅಂತರದಲ್ಲಿರುವ ಒಂದು ದೇವಸ್ಥಾನ ಹಾಗೂ ಒಂದು ಮಸೀದಿ, ಪರಸ್ಪರರ ಪ್ರಾರ್ಥನೆಗಳಿಗೆ ಗೌರವ ಕೊಡುವ ಮೂಲಕ ಭಾತೃಪ್ರೇಮ ಮೆರೆದು ಮಾದರಿಯೆನಿಸಿವೆ. ಇಲ್ಲಿ, ಪ್ರತಿದಿನ ಮಸೀದಿಯಲ್ಲಿ ಆಜಾನ್‌ ಶುರುವಾದಾಗ, ದೇಗುಲದ ಧ್ವನಿವರ್ದಕಗಳನ್ನು ನಿಲ್ಲಿಸಲಾಗುತ್ತದೆ. ಹಾಗೆಯೇ, ದೇಗುಲದ ಧ್ವನಿವರ್ದಕಗಳಲ್ಲಿ ಪ್ರಾರ್ಥನೆಗಳು ಮೊಳಗುತ್ತಿದ್ದಾಗ ಮಸೀದಿಯ ಧ್ವನಿವರ್ದಕಗಳನ್ನು ಬಂದ್‌ ಮಾಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next