Advertisement

ಭಾರತದ ಐಟಿ ಶೇ.5.3ಕ್ಕೆ ಕುಸಿತ?

03:45 AM Mar 08, 2017 | Team Udayavani |

ಬೆಂಗಳೂರು: ಭಾರತದ ಐಟಿ ಕ್ಷೇತ್ರಕ್ಕೆ 2017 ಕಹಿವರ್ಷವೇ? 10 ಲಕ್ಷ ಕೋಟಿ ಆದಾಯ ತರುವ ಐಟಿ ವಲಯ ಈ ವರ್ಷ ಶೇ.5.3ಕ್ಕೆ ಕುಸಿತ ಕಾಣಲಿದೆ. ಹೀಗೆ ಕುಸಿತದ ಕಾರಣಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಆಡಳಿತದ ಪೆಟ್ಟೂ ಸೇರಿಕೊಂಡಿದೆ. ಅಲ್ಲದೆ, ದೇಶದ 5 ಪ್ರಮುಖ ಸಾಫ್ಟ್ವೇರ್‌ ದಿಗ್ಗಜ ಸಂಸ್ಥೆಗಳಿಗೆ ಇದರ ಬಿಸಿ ತೀವ್ರವಾಗಿ ತಟ್ಟಲಿದೆ! ಈ ಬಗ್ಗೆ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. 

Advertisement

“ಡೀಪ್‌ಡೈವ್‌ ಎವರೆಸ್ಟ್‌ ಗ್ರೂಪ್‌’ ಎಂಬ ಐಟಿ ಸರ್ವೆ ಸಂಸ್ಥೆ ನಡೆಸಿದ ಸಂಶೋಧನಾ ವರದಿ ಹೀಗೊಂದು ಆತಂಕದ ಬಾಂಬ್‌ ಸಿಡಿಸಿದೆ. 2016ರಲ್ಲಿ ಭಾರತದ ಐಟಿ ವಲಯ ಶೇ.8.7ರಷ್ಟು ಪ್ರಗತಿಯಲ್ಲಿತ್ತು. ಆದರೆ, ಈ ಬಾರಿ ಅದು 2.4ರಷ್ಟು ಕುಸಿತ ಕಂಡು, ಶೇ.6.3ಕ್ಕೆ ನಿಲ್ಲಲಿದೆ. ಈ 6.3ರಷ್ಟು ಪ್ರಗತಿ ಕೇವಲ ಟಾಪ್‌ 5 ಕಂಪನಿಗಳಾದ ಟಿಸಿಎಸ್‌, ಕಾಗ್ನಿಝಾಂಟ್‌, ಇನ್ಫೋಸಿಸ್‌, ವಿಪ್ರೋ ಹಾಗೂ ಎಚ್‌ಸಿಎಲ್‌ನದ್ದು! ಇನ್ನು ಅತಿ ಸಣ್ಣ ಕಂಪನಿಗಳು 5.3ರಷ್ಟು ಮಾತ್ರ ಅಭಿವೃದ್ಧಿ ಹೊಂದಲಿವೆ ಎಂದು ಭವಿಷ್ಯ ನುಡಿದಿದೆ.

ರಫ್ತುಗೂ ಹೊಡೆತ: ಅಲ್ಲದೆ ಇದರಿಂದ ದೇಶದ ಐಟಿ ರಫ್ತು ವಿಭಾಗದಲ್ಲೂ ದೊಡ್ಡ ಹಿನ್ನಡೆ ಆಗಲಿದೆ. 2015ರಲ್ಲಿ ಶೇ.12.3 ಇದ್ದ ರಫ್ತು, ಮರುವರ್ಷ ಶೇ.8.7ಕ್ಕೆ ಇಳಿಕೆ ಕಂಡಿತ್ತು. ಆದರೆ, ಈ ಬಾರಿ ಶೇ.6.3ಕ್ಕೆ ಇಳಿಯಲಿದೆ ಎಂದು ಸಂಸ್ಥೆ ಅಂದಾಜಿಸಿದೆ. 

ನಷ್ಟಕ್ಕೆ ಏನು ಕಾರಣ?
ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಹೊರಗುತ್ತಿಗೆ, ವೀಸಾ ನಿರ್ಬಂಧ ನೀತಿ, ಐರೋಪ್ಯ ಒಕ್ಕೂಟದಿಂದ ಹೊರಬರುತ್ತಿರುವ ಬ್ರಿಟನ್‌ನ ಬ್ರೆಕ್ಸಿಟ್‌ ನೀತಿ ಐಟಿ ಕ್ಷೇತ್ರಕೆ‌R ಹೊಡೆತ ನೀಡಲಿದೆ. ಕೌÉಡ್‌ ತಂತ್ರಜ್ಞಾನದ ಅಳವಡಿಕೆಯಿಂದ ಸಂಸ್ಥೆಗಳ ಕಾರ್ಯವೈಖರಿ ಮರು ನಿರ್ಮಾಣಗೊಳ್ಳುವುದರಿಂದ ಐಟಿ ಕ್ಷೇತ್ರ ಮಂದಗತಿಯ ಹೆಜ್ಜೆಯಿಡಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next