Advertisement

53 ಲಕ್ಷ ರೂ. ಅಡಿಕೆ ಅಕ್ರಮ ಸಾಗಾಟ

01:45 AM Nov 11, 2020 | mahesh |

ಕುಂದಾಪುರ: ಲಾರಿಯಲ್ಲಿ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಅಡಿಕೆ ಸಾಗಾಟವಾಗುತ್ತಿದ್ದುದನ್ನು ಪಶ್ಚಿಮ ವಲಯ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಮಂಗಳವಾರ ಪತ್ತೆಹಚ್ಚಿದ್ದಾರೆ. ರಸ್ತೆ ಜಾಗೃತಿ ಕಾರ್ಯ ನಡೆಸುವ ಸಂದರ್ಭ ಅಂಪಾರು-ಕೊಲ್ಲೂರು ರಸ್ತೆಯ ವಂಡ್ಸೆಯಲ್ಲಿ ಲಾರಿಯನ್ನು ತಡೆ ಹಿಡಿದು 380 ಚೀಲ (24,700 ಕೆ.ಜಿ.) ಅಡಿಕೆಯನ್ನು ವಾಹನದೊಂದಿಗೆ ವಶಪಡಿಸಿಕೊಂಡಿದ್ದಾರೆ.

Advertisement

ವಿಚಾರಣೆ ನಡೆಸಿದಾಗ ಸರಕು ಸಾಗಣೆದಾರರು ಕರ್ನಾಟಕದಲ್ಲಿ ಅಡಿಕೆ ಸರಕನ್ನು ಪಡೆದು ಅದನ್ನು ಕೇರಳ ವರ್ತಕರಿಗೆ ಸಂಬಂಧಿಸಿದ ನಕಲಿ ದಾಖಲೆಗಳೊಂದಿಗೆ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಪ್ರಕರಣದಡಿಯಲ್ಲಿ ಅಡಿಕೆ ಸಾಗಣೆದಾರರಾದ ಯೂನಿಯನ್‌ ಕಾರ್ಗೋ ಮೂವರ್ ಪುತ್ತೂರು ಅವರಿಂದ ತೆರಿಗೆ ಮತ್ತು ದಂಡ ಸಹಿತ ಒಟ್ಟು 53.10 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಉದಯಶಂಕರ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next