Advertisement

Heat wave;53.3 ಡಿ.ಸೆ. ತಾಪಮಾನಕ್ಕೆ ಕ್ಯಾಲಿಫೋರ್ನಿಯಾ ತತ್ತರ: 3.6 ಕೋಟಿ ಮಂದಿಗೆ ಸಂಕಷ್ಟ

12:05 AM Jul 09, 2024 | Team Udayavani |

ಲಾಸ್‌ಏಂಜಲೀಸ್‌: ಕ್ಯಾಲಿಫೋರ್ನಿ ಯಾದಲ್ಲಿ ಬಿಸಿಲಿನ ತಾಪ ಮಿತಿ ಮೀರಿ ದ್ದು, ಸೋಮವಾರ ತಾಪಮಾನ 53.3 ಡಿಗ್ರಿ ಸೆ. (128 ಡಿಗ್ರಿ ಫ್ಯಾರನ್‌ಹೀಟ್‌)ಗೆ ಏರಿಕೆಯಾಗಿದೆ. ಮಿತಿ ಮೀರಿದ ತಾಪ ದಿಂದಾಗಿ ಡೆತ್‌ ವ್ಯಾಲಿ ನೋಡಲು ತೆರಳಿದ್ದ ಪ್ರವಾಸಿಗನೊಬ್ಬ ಮೃತ ಪಟ್ಟಿದ್ದಾನೆ.

Advertisement

6 ಮಂದಿ ಡೆತ್‌ ವ್ಯಾಲಿ ನೋಡಲು ಬೈಕಿನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಅತಿಯಾದ ತಾಪಕ್ಕೆ ಸಿಲುಕಿ ಓರ್ವ ಮೃತಪಟ್ಟಿದ್ದಾನೆ. ಉಳಿದವರಿಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

3.6 ಕೋಟಿ ಮಂದಿಗೆ ಸಂಕಷ್ಟ: ಧೀರ್ಘಾವಧಿಯಿಂದ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಇದ ರಿಂದಾಗಿ ಸುಮಾರು 3.6 ಕೋಟಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಲಿ ಫೋರ್ನಿಯಾದಲ್ಲಿ ಉಷ್ಣಾಂಶ 43.3 ಡಿ.ಸೆ. ದಾಖಲಾಗಿದೆ. ಡೆತ್‌ ವ್ಯಾಲಿಯಲ್ಲಿ ಗರಿಷ್ಠ 53.3 ಡಿಗ್ರಿ ದಾಖಲಾಗಿದೆ.

ಹೆಚ್ಚುತ್ತಿರುವ ತಾಪಮಾನವು ಕಾಡ್ಗಿಚ್ಚಿನ ಭೀತಿಯನ್ನೂ ಹೆಚ್ಚಿಸಿದೆ. ಬೇಸಗೆ ಆರಂಭವಾದಾಗಿನಿಂದ ಈವರೆಗೆ ಕ್ಯಾಲಿಫೋರ್ನಿಯಾದಲ್ಲಿ 50ಕ್ಕೂ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next