ವಾಷಿಂಗ್ಟನ್: ಒಬ್ಬರು ಎಷ್ಟು ಮದುವೆಯಾಗಬಹುದು? ಒಂದು, ಎರಡು, ಹೆಚ್ಚೆಂದರೆ 3 ಎನ್ನುವುದು ಸಾಮಾನ್ಯ ಉತ್ತರ. ಆದರೆ ಅಮೆರಿಕದ ಈ ಮಹಿಳೆಯ ಅದನ್ನು ಸುಳ್ಳು ಮಾಡಿ ತೋರಿಸಿದ್ದಾಳೆ. ಈಗಾಗಲೇ 11 ಮದುವೆಯಾಗಿ, ದಾಂಪತ್ಯ ಅಂತ್ಯ ಮಾಡಿರುವ ಮಹಿಳೆ ಇದೀಗ 12ನೇ ಮದುವೆಗೆ ಸಿದ್ಧತೆ ನಡೆಸಿಕೊಂಡಿದ್ದಾಳೆ.
ಅಮೆರಿಕದ ಉತಾಹ್‌ನ ಮೊನೆಟ್ಟೆ ಡಯಾಸ್ (52 ವ) ಹೆಸರಿನ ಮಹಿಳೆ ಇದುವರೆಗೆ 11 ಮದುವೆ ಯಾಗಿದ್ದಾಳೆ. ಆಕೆಯ ದೀರ್ಘವಾದಿ ದಾಂಪತ್ಯ ವೆಂದರೆ ಅದು 10 ವರ್ಷ. ಅತಿ ಕಡಿಮೆಯ ದಾಂಪತ್ಯವಾವಧಿ ಆರು ವಾರ! ಪತಿಯೊಂದಿಗೆ ಜೀವನ ಸರಿಯಾಗಿಲ್ಲ ಎನಿಸಿದಾಕ್ಷಣ ಆಕೆ ದಾಂಪತ್ಯಕ್ಕೆ ಅಂತ್ಯ ಹಾಡುತ್ತಾಳಂತೆ. ಅದಾದ ಮೇಲೆ ಮತ್ತೆ ಬೇರೊಬ್ಬ ರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಮದುವೆಯಾಗದೆಯೇ ಸೆಕ್ಸ್ ತಪ್ಪು ಎನ್ನುವ ಕಾರಣಕ್ಕೆ, ಮದುವೆಯಾಗಿ ದಾಂಪತ್ಯ ಆರಂಭಿಸುತ್ತಾಳಂತೆ.
ಇದನ್ನೂ ಓದಿ:ವಾಷಿಂಗ್ಟನ್ ದೂತಾವಾಸದಲ್ಲೂ ದಿವಾಳಿ ಬಿಸಿ!
ಬರೋಬ್ಬರಿ 11 ಪ್ರೀತಿಯಲ್ಲಿ ಸೋತಿದ್ದರೂ ಆಕೆಗೆ ಪ್ರೀತಿಯ ಬಗೆಗಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲವಂತೆ. ಇದೀಗ 54 ವರ್ಷದ “ಡಬಲ್ ಡಿವೋರ್ಸಿ’ಯಲ್ಲಿ (ಎರಡು ಬಾರಿ ವಿಚ್ಛೇದನ ಪಡೆದವರು) ಮತ್ತೆ ಪ್ರೀತಿ ಕಂಡಿದ್ದು, ಮದುವೆಗೆ ಸಿದ್ಧಳಾಗಿದ್ದಾಳೆ!
ಅವಳಿಗೆ ಹುಡುಗರ ಹುಚ್ಚು, ಎಷ್ಟು ಪ್ರೀತಿಸಿದರೂ ಸಮಾಧಾನವಾಗದ ಹಿನ್ನೆಲೆಯಲ್ಲಿ ಪದೇ ಪದೇ ಮದುವೆಯಾಗುವ ಖಯಾಲಿ ತನಗಿದೆ ಎಂದು ಖುದ್ದು ಆಕೆಯೇ ಹೇಳಿಕೊಂಡಿದ್ದಾಳೆ.