Advertisement

ರಾಜ್ಯದಲ್ಲಿ 52 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷೆ: ಪ್ರಿಯಾಂಕ್‌ ಖರ್ಗೆ

10:14 PM Jun 25, 2024 | Team Udayavani |

ಬೆಂಗಳೂರು: ಐಟಿ-ಬಿಟಿ ಇಲಾಖೆ ನಿಯೋಗದ ವಿದೇಶ ಭೇಟಿಯಿಂದ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ್ದು ಸುಮಾರು 52 ಸಾವಿರ ಕೋಟಿ ರೂ. (6.2 ಬಿಲಿಯನ್‌ ಡಾಲರ್‌) ಬಂಡವಾಳ ರಾಜ್ಯಕ್ಕೆ ಹರಿದುಬರುವ ನಿರೀಕ್ಷೆ ಇದೆ ಎಂದು ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Advertisement

ಜೂನ್‌ 4ರಿಂದ 7ರವರೆಗೆ ಅಮೆರಿಕದ ಕ್ಯಾಲಿಫೋರ್ನಿಯಾ, ಮೆಸಚೂಸೆಟ್ಸ್‌ ಸೇರಿ ವಿವಿಧೆಡೆ ಬಂಡವಾಳ ಹೂಡಿಕೆ ಆಕರ್ಷಿಸುವ ಸಂಬಂಧ ಅಂತಾರಾಷ್ಟ್ರೀಯ ರೋಡ್‌ ಶೋಗಳು ನಡೆದವು. ಅದರಲ್ಲಿ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಿಯೋಗ ಕೂಡ ಭಾಗವಹಿಸಿತ್ತು. ಈ ವೇಳೆ ಹಲವು ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿಸಿದ್ದಲ್ಲದೆ, ಕೆಲವರು ಒಡಂಬಡಿಕೆ ಕೂಡ ಮಾಡಿಕೊಂಡಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ 52 ಸಾವಿರ ಕೋಟಿ ಹೂಡಿಕೆ ಜತೆಗೆ ಸಾವಿರಾರು ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕು ದಿನಗಳ ಭೇಟಿಯಲ್ಲಿ ಲಂಡನ್‌, ಫ್ರಾನ್ಸ್‌, ಅಮೆರಿಕ ಸೇರಿದಂತೆ ಹತ್ತುಹಲವು ದೇಶಗಳ ಕಂಪನಿಗಳೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಪ್ರಮುಖವಾಗಿ ಏರೋಸ್ಪೇಸ್‌, ಚಿಪ್‌ ತಯಾರಿಕೆ, ಆಟೋ ಸಿಸ್ಟಮ್ಸ್‌, ಸೆಮಿಕಂಡಕ್ಟರ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗೆ ಕಂಪನಿಗಳು ಆಸಕ್ತಿ ತೋರಿಸಿವೆ. ಕೆಲವು ಒಡಂಬಡಿಕೆಗಳಾಗಿ ಮಾರ್ಪಟ್ಟಿದ್ದರೆ, ಕೆಲವು ಮಾತುಕತೆ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ಎಷ್ಟು ಉದ್ಯೋಗ ಸೃಷ್ಟಿಯಾಗಬಹುದು ಎಂದು ನಿಖರವಾಗಿ ಈಗಲೇ ಹೇಳುವುದು ಕಷ್ಟ. ಜಿಸಿಸಿ (ಗ್ಲೋಬಲ್‌ ಕ್ಲೀನ್‌ಟೆಕ್‌ ಕ್ಯಾಪಿಟಲ್‌) ದೃಷ್ಟಿಯಿಂದ ಹೇಳುವುದಾದರೆ, 35ರಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next