Advertisement
ಲಗ್ಗೆರೆ ನಿವಾಸಿ ಉಮಾ (22) ಬಂಧಿತೆ. ಈಕೆಯ ಮನೆಯಲ್ಲಿದ್ದ 5 ಲಕ್ಷ ರೂ. ನಗದು ಮತ್ತು 30 ಚಿನ್ನದ ನಾಣ್ಯಗಳನ್ನು ಹಾಗೂ ಆಕೆ ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯ ಗಳನ್ನು ಮತ್ತು 46.90 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
Related Articles
Advertisement
ಸಿಸಿ ಕ್ಯಾಮೆರಾ, ಬಾತ್ಮೀದಾರರ ಮಾಹಿತಿ ಆಧರಿಸಿ ಸೆರೆ: ಆರೋಪಿ ಉಮಾಗೆ, ತನ್ನ ಸಹೋದರಿ ಮನೆಯಲ್ಲಿ ನಗದು, ಚಿನ್ನಾಭರಣ ಇರುವ ವಿಚಾರ ಗೊತ್ತಾಗಿತ್ತು. ಇತ್ತೀಚೆಗೆ ಮನೆಗೆ ಬಂದಾಗ ಯಾರಿಗೂ ಗೊತ್ತಾಗದಂತೆ ಮನೆ ಕೀಯನ್ನು ಕೊಂಡೊಯ್ದು ನಕಲಿ ಕೀ ಮಾಡಿಸಿಕೊಂಡಿದ್ದಳು. ಏ.22 ರಂದು ಸಹೋದರಿ ಕುಟುಂಬ ಸಮೇತ ಜಾತ್ರೆ ಹೋಗಿರುವುದನ್ನು ಖಚಿತ ಪಡಿಸಿಕೊಂಡ ಆರೋಪಿ, ವಾಪಸ್ ಬರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಳು. ಈ ಮಧ್ಯೆ ಈಕೆಯೂ ಏ.23ರಂದು ಜಾತ್ರೆಗೆ ಹೋಗಿ, ಅದೇ ದಿನ ರಾತ್ರಿ ವಾಪಸ್ ಬೆಂಗಳೂರಿಗೆ ಬಂದು, ನಕಲಿ ಕೀ ಬಳಸಿ ಸಹೋದರಿ ಮನೆಯೊಳಗೆ ಹೋಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ತನಿಖೆ ವೇಳೆ ಆರೋಪಿ ದೂರುದಾರ ಮನೆ ಸಮೀಪದ ಸಿಸಿ ಕ್ಯಾಮೆರಾದಲ್ಲಿ ರಾತ್ರಿ ಓಡಾಟ ನಡೆಸಿರುವ ದೃಶ್ಯಗಳು ಸೆರೆಯಾಗಿತ್ತು. ಮತ್ತೂಂದೆಡೆ ಕೃತ್ಯ ನಡೆದ ದಿನ ಆರೋಪಿ ಲಗ್ಗೆರೆಯ ತನ್ನ ಮನೆಯಲ್ಲಿ ಇರಲಿಲ್ಲ ಎಂಬುದು ಬಾತ್ಮೀದಾರರಿಂದ ಖಚಿತ ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.
ಲಕ್ಷಾಂತರ ರೂ. ಸಾಲ ತೀರಿಸಿದ್ದ ಆರೋಪಿ : ಪಿಯುಸಿ ವ್ಯಾಸಂಗ ಮಾಡಿರುವ ಉಮಾ, ಸ್ವಲ್ಪ ಶೋಕಿ ಜೀವನಕ್ಕೆ ಮಾರು ಹೋಗಿದ್ದಳು. ಅದಕ್ಕಾಗಿ ಹೆಚ್ಚು ಹಣ ವ್ಯಯಿಸುತ್ತಿದ್ದಳು. ಆದರಿಂದ 3-4 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಸಹೋದರಿ ಮನೆಯಲ್ಲಿ ಕಳವು ಮಾಡಲು ಯೋಚಿಸಿದ್ದಳು. ಇನ್ನು ಕದ್ದ ಹಣದ ಪೈಕಿ ಸಾಲ ತೀರಿಸಿದ್ದು, 5 ಲಕ್ಷ ರೂ. ಅನ್ನು ಮನೆಯಲ್ಲಿ ಇಟ್ಟಿದ್ದಳು. ಬಾಕಿ ಹಣ ಮತ್ತು ನಗದನ್ನು ತಾನು ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್ ಮಾಲೀಕರಿಗೆ, ಸಹೋದರಿ ಮನೆಯಲ್ಲಿ ಯಾರು ಇಲ್ಲ. ಹೀಗಾಗಿ ಇಟ್ಟುಕೊಳ್ಳಿ ಎಂದು ಸುಳ್ಳು ಹೇಳಿ ಇರಿಸಿದ್ದಳು ಎಂದು ಪೊಲೀಸರು ಹೇಳಿದರು.