Advertisement

ದೇವಸ್ಥಾನ ಅಭಿವೃದ್ಧಿಗೆ 52 ಲಕ್ಷ ರೂ. ಅನುದಾನ

03:10 PM Nov 29, 2020 | Adarsha |

ಹಾನಗಲ್ಲ: ಧರ್ಮವನ್ನು ಉಳಿಸಲು ದೇವಾಲಯಗಳ ಅಭಿವೃದ್ಧಿ ಮುಖ್ಯವಾಗಿದೆ. ಹಾಗಾಗಿ, ತಾಲೂಕಿನ ಒಟ್ಟು 251 ಮುಜರಾಯಿ ದೇವಸ್ಥಾನಗಳಲ್ಲಿ ವಿವಿಧ ಗ್ರಾಮಗಳ 18 ದೇವಸ್ಥಾನಗಳ ಅಭಿವೃದ್ಧಿಗೆ 52 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

Advertisement

ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇವಸ್ಥಾನ ಸಮಿತಿಯವರು ತಮ್ಮ ದಾಖಲೆಗಳನ್ನು ಸಲ್ಲಿಸಿ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಅಲ್ಲದೇ, ತಸ್ತಿಖ್‌ ಪಡೆಯುತ್ತಿರುವ 162 ದೇವಸ್ಥಾನಗಳ ಅರ್ಚಕರಿಗೆ ವರ್ಷಕ್ಕೆ 4 ಕಂತುಗಳಲ್ಲಿ ವಾರ್ಷಿಕ 48 ಸಾವಿರ ರೂ. ಬಿಡುಗಡೆಯಾಗಲಿದ್ದು, ಪ್ರಸಕ್ತ ಸಾಲಿನ ಎರಡುಕಂತುಗಳ ಮೊತ್ತ 38.88 ಲಕ್ಷ ರೂ. ಅನುದಾನಬಿಡುಗಡೆ ಮಾಡಲಾಗಿದೆ ಎಂದರು.

ಮುಜರಾಯಿ ದೇವಸ್ಥಾನಗಳನ್ನು ಹೊರತುಪಡಿಸಿ 2017-18, 2018-19 ಹಾಗೂ 2019-20ನೇ ಸಾಲಿನಲ್ಲಿ ಸರಕಾರದಿಂದ ಬಿಡುಗಡೆಯಾದ ಅನುದಾನದಡಿ ಆರಾಧನಾ ಯೋಜನೆಗೆ 9.37 ಲಕ್ಷ ರೂ., ವಿಶೇಷ ಘಟಕ ಯೋಜನೆಗೆ 22.44 ಲಕ್ಷ ರೂ. ಹಾಗೂ ಗಿರಿಜನ ಉಪ ಯೋಜನೆಗೆ 3.46 ಲಕ್ಷ ರೂ. ಸೇರಿದಂತೆ ಒಟ್ಟು 35.27 ಲಕ್ಷ ರೂ. ಅನುದಾನವನ್ನು ಆರಾಧನಾ ಸಮಿತಿಯ ನಿರ್ದೇಶನದಂತೆ ತಾಲೂಕಿನ 28 ದೇವಾಲಯಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಇದರಲ್ಲಿ 9 ದೇವಸ್ಥಾನಗಳು ಸಾಮಾನ್ಯ, 17 ವಿಶೇಷ ಘಟಕ ಯೋಜನೆಯ ದೇವಸ್ಥಾನಗಳುಹಾಗೂ 2 ಗಿರಿಜನ ಉಪಯೋಜನೆಯ ದೇವಸ್ಥಾನಗಳನ್ನು ಆಯ್ಕೆ ಮಾಡಲಾಗಿದೆ. ಈ ದೇವಸ್ಥಾನ ಸಮಿತಿಯವರು ಸೂಕ್ತ ದಾಖಲೆಗಳನ್ನು ತಹಶೀಲ್ದಾರ್‌ ಕಾರ್ಯಾಲಯಕ್ಕೆ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು ಎಂದು ಸಿ.ಎಂ.ಉದಾಸಿ ತಿಳಿಸಿದರು.

ಇದನ್ನೂ ಓದಿ:ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ

ಆರಾಧನಾ ಯೋಜನೆಯಡಿ ತಾಲೂಕಿನ ಆಡೂರಿನ ಬನಶಂಕರಿ ದೇವಸ್ಥಾನ, ತಿಳವಳ್ಳಿಯ ವೀರಭದ್ರೇಶ್ವರ ದೇವಸ್ಥಾನ, ವರ್ದಿಯ ವೀರಭದ್ರೇಶ್ವರ ದೇವಸ್ಥಾನ, ಚಿಕ್ಕಾಂಶಿ-ಹೊಸೂರಿನ ದುರ್ಗಾದೇವಿ ದೇವಸ್ಥಾನ, ಮಲ್ಲಿಗ್ಗಾರ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನ, ಯಳವಟ್ಟಿಯ ಶಿಬಾರ ಜೀರ್ಣೋದ್ಧಾರ, ಹಾನಗಲ್ಲಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಹುಣಶೆಟ್ಟಿಕೊಪ್ಪದ ಬಸವೇಶ್ವರ ದೇವಸ್ಥಾನ, ಹಿರೇಕಾಂಶಿಯ ಲೋಕ ಪರಮೇಶ್ವರಿ ದೇವಸ್ಥಾನಗಳು ಅಭಿವೃದ್ಧಿಗೊಳ್ಳಲಿವೆ ಎಂದರು.

Advertisement

ವಿಶೇಷ ಘಟಕ ಯೋಜನೆಯಡಿ ತಾಲೂಕಿನ ಬೊಮ್ಮನಹಳ್ಳಿ ಮಾರುತಿ ದೇವಸ್ಥಾನ, ಕರಗುದರಿಯ ದ್ಯಾಮವ್ವನ ಪಾದಗಟ್ಟಿ, ಹಿರೇಬಾಸೂರಿನ ದುರ್ಗಾದೇವಿ ದೇವಸ್ಥಾನ, ಇನಾಂಲಕ್ಮಾಪೂರದ ಗುರುಸಿದ್ದೇಶ್ವರ ದೇವಸ್ಥಾನ, ಮಾಸನಕಟ್ಟೆಯ ಮಾತಂಗವ್ವ ದೇವಸ್ಥಾನ, ಇನಾಂದ್ಯಾಮನಕೊಪ್ಪದ ಕರೆಮ್ಮ ದೇವಿ ದೇವಸ್ಥಾನ, ವರ್ದಿಯ ಮಾತಂಗಮ್ಮದೇವಸ್ಥಾನ, ಹರಳಕೊಪ್ಪ ಗ್ರಾಮದ ಬಸವೇಶ್ವರ ದೇವಸ್ಥಾನ, ಗೆಜ್ಜೆಹಳ್ಳಿಯ ಮಾರುತಿ ದೇವಸ್ಥಾನ, ಅಕ್ಕಿಆಲೂರಿನ ಮಾತಂಗೇಶ್ವರಿ ದೇವಸ್ಥಾನ, ಶೀಗಿಹಳ್ಳಿ, ತುಮರಿಕೊಪ್ಪ, ಕಂಚಿನೆಗಳೂರ ಗ್ರಾಮಗಳ ಮಾತಂಗಮ್ಮ ದೇವಸ್ಥಾನ, ಬಾಳಿಹಳ್ಳಿಯ ಮಾರುತಿ ದೇವಸ್ಥಾನ, ಆಡೂರಿನ ದುರುಗಮ್ಮ ದೇವಸ್ಥಾನ, ಜಂಗಿನಕೊಪ್ಪದ ಕೃಷ್ಣ ದೇವಸ್ಥಾನ, ಆರೆಗೊಪ್ಪದ ಮಹಾತೆಂಗಮ್ಮನ ದೇವಸ್ಥಾನಗಳು ಹಾಗೂ ಗಿರಿಜನ ಉಪ ಯೋಜನೆಯಡಿ ತಾಲೂಕಿನ ಬಾದಾಮಗಟ್ಟಿ ಗ್ರಾಮದ ಮಾರುತಿ ದೇವಸ್ಥಾನ, ತಿಳವಳ್ಳಿ-ಯತ್ತಿನಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನಗಳು ಸೇರಿದಂತೆ ಒಟ್ಟು 28 ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next