Advertisement

ಕೊಳ್ಳೇಗಾಲ ಕ್ಷೇತ್ರಕ್ಕೆ 52 ಕೋಟಿ ವಿಶೇಷ ಅನುದಾನ

03:08 PM Dec 19, 2022 | Team Udayavani |

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ದಾಖಲೆ ಪ್ರಮಾಣದ 52 ಕೋಟಿ ರೂ. ವಿಶೇಷ ಅನುದಾನ ತರಲಾಗಿದೆ ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

Advertisement

ವಿಶೇಷ ಅನುದಾನ ಬಿಡುಗಡೆ: ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಸರ್ಕಾರದಿಂದ ಅಭಿವೃದ್ಧಿಗೆ ಅನೇಕ ಯೋಜನೆಗಳಿದ್ದು ಇದಕ್ಕೆ ಅನುದಾನವೂ ಹೆಚ್ಚಾಗಿ ಬರುತ್ತದೆ. ಆದರೆ ಲಿಂಗಾಯತ, ಉಪ್ಪಾರ, ಕುರುಬ ಸೇರಿದಂತೆ ಇತರೆ ಸಾಮಾನ್ಯ ವರ್ಗಗಳು ವಾಸ ಮಾಡುವ ಬಡಾವಣೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಮೊದಲು ಧ್ವನಿ ಎತ್ತಿದ್ದು ನಾನೇ. ಹಾಗಾಗಿ ನನಗೆ ಈ ಅನುದಾನ ಲಭಿಸಿದೆ. ಇದನ್ನು ಆರೋಗ್ಯ, ಶಿಕ್ಷಣ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇತರೆ ಜನಾಂಗದವರು ವಾಸಿಸುವ ಬಡಾವಣೆಗಳ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನವನ್ನು ನೀಡಿ ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿವೆ ಎಂದು ತಿಳಿಸಿದರು.

ತಾಲೂಕಿನ ಕಟ್ನವಾಡಿ, ಬಸವಾಪುರ, ಮಲ್ಲಿಗೆಹಳ್ಳಿ, ಕೃಷ್ಣಾಪುರ, ಕೊಮಾರನಪುರ, ಚಾಮಲಾಪುರ, ಗೌಡಹಳ್ಳಿ, ಬೂದಿತಿಟ್ಟು ಗ್ರಾಮಗಳಲ್ಲಿ 2.60 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಭಾಗದ ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದ್ದು ಆದ್ಯತೆಗೆ ಅನುಗುಣವಾಗಿ ಇಲ್ಲಿನ ವಾಸಿಗಳು ಈ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಕೆಆರ್‌ಐಡಿಎಲ್‌ ವತಿಯಿಂದ ಕಾಮಗಾರಿ ನಡೆಯುತ್ತಿದ್ದು ಗುಣಮಟ್ಟದ ಕಾಮ ಗಾರಿಯನ್ನು ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಆರ್‌ಐಡಿಎಲ್‌ನ ಎಇಇ ಚಿಕ್ಕಲಿಂಗಯ್ಯ, ಜೆಇ ಚರಣ್‌, ಗ್ರಾಪಂ ಅಧ್ಯಕ್ಷರಾದ ಬಾಲುಪ್ರಸಾದ್‌, ಮಲ್ಲಿಕಾರ್ಜುನಸ್ವಾಮಿ, ಪ್ರವೀಣ್‌ಕುಮಾರ್‌, ಶಿವನಂಜಮ್ಮ, ಪಿಡಿಒಗಳಾದ ಲಲಿತಾ, ಮಮತಾ, ಸವಿತಾ ಗೌಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಆಪ್ತ ಸಹಾಯಕ ಮಹಾದೇವಸ್ವಾಮಿ, ರಾಮು, ಮಹೇಶ್‌, ಚಂದ್ರಶೇಖರ್‌, ಚಿಕ್ಕಣ್ಣ, ಬಿಳಿಗಿರಿ, ಬೂದಿತಿಟ್ಟು ನಾಗೇಂದ್ರ, ಚಾಮಲಪುರ ವಿಜಯ್‌, ಚಿನ್ನಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next