Advertisement

51,700ರೂ. ದಂಡ ವಸೂಲಿ : 7 ವಲಯಗಳಲ್ಲಿ ಮಾಸ್ಕ್ ಧರಿಸದ ಒಟ್ಟು 86 ಜನರಿಗೆ ದಂಡ

11:43 AM May 03, 2020 | mahesh |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಓಡಾಡಿದ ಆರೋಪದ ಮೇಲೆ 86ಜನರಿಗೆ ಮಾರ್ಷಲ್‌ಗ‌ಳು ಶನಿವಾರ ದಂಡ ವಿಧಿಸಿದ್ದು, ಬರೋಬ್ಬರಿ 51,700 ರೂ. ದಂಡ
ಸಂಗ್ರಹಿಸಿದ್ದಾರೆ. ಮಾಸ್ಕ್ ಧರಿಸದೆ ಓಡಾಡುವವರಿಗೆ ಮೊದಲ ಬಾರಿಗೆ ಒಂದು ಸಾವಿರ ಹಾಗೂ ಎರಡನೆ ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಎರಡು ಸಾವಿರ ದಂಡ ವಿಧಿಸುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಮೇ.1ಕ್ಕೆ ಆದೇಶ ಹೊರಡಿಸಿದ್ದರು. ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿತ್ತು. ಅದರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವವರಿಗೆ ದಂಡ ವಿಧಿಸಲಾಗುತ್ತಿದ್ದು, ಯಲಹಂದ ವಲಯದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಉಳಿದ ಏಳು ವಲಯಗಳಲ್ಲಿ ಒಟ್ಟು 86ಜನರಿಗೆ ದಂಡ ವಿಧಿಸಲಾಗಿದೆ.

Advertisement

ದಂಡ ಸಂಗ್ರಹ ಉದ್ದೇಶವಲ್ಲ
ದಂಡ ಸಂಗ್ರಹಿಸುವ ಉದ್ದೇಶದಿಂದ ಮಾಸ್ಕ್ ಧರಿಸದವರಿಗೆ ನಾವು ದಂಡ ವಿಧಿಸುತ್ತಿಲ್ಲ. ಕೊರೊನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ
ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ. ಬಿಬಿಎಂಪಿ ಹಿರಿಯ, ಕಿರಿಯ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್‌ಗ‌ಳು ಮಾಸ್ಕ್ ಬಳಕೆ ಮಾಡದವರಿಗೆ ದಂಡ ವಿಧಿಸುತ್ತಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಒಂದೇ ದಿನ 14.10 ಲಕ್ಷ ರೂ. ದಂಡ
ಬೆಂಗಳೂರು: ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ಪೊಲೀಸರ ವಶದಲ್ಲಿರುವ ತಮ್ಮ ವಾಹನಗಳನ್ನ ಹಿಂಪಡೆಯಲು ಶನಿವಾರವೂ ವಾಹನಗಳ ಮಾಲೀಕರು ನಗರದ ಎಲ್ಲಾ ಕಾನೂನು ಸುವ್ಯವಸ್ಥೆ ಪೊಲೀಸ್‌ ಠಾಣೆಗಳ ಎದುರು ಕಿ.ಮೀಟರ್‌ ಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ಈ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಇದುವರೆಗೂ 14 ಲಕ್ಷಕ್ಕೂ ಅಧಿಕ ದಂಡದ ಮೊತ್ತ ಸಂಗ್ರಹಿಸಲಾಗಿದೆ. ನೂರಾರು ಮಂದಿ ಒಮ್ಮೆಲೆ ಠಾಣೆ ಮುಂಭಾಗ ಬಂದಿದರಿಂದ ಸರದಿ ಸಾಲು ದೊಡ್ಡದಾಗಿದ್ದು, ಪ್ರತಿಯೊಬ್ಬರಿಗೂ ಸಾಮಾಜಿಕಅಂತರಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next