Advertisement

ಚಾಮರಾಜ ನಗರ: 51 ಕೋವಿಡ್ 19 ಸೋಂಕು ಪ್ರಕರಣ ದೃಢ: 38 ಮಂದಿ ಗುಣಮುಖ

07:37 PM Sep 04, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 51 ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.

Advertisement

ಇದೇ ವೇಳೆ 38 ಮಂದಿ ಗುಣಮುಖರಾಗಿದ್ದಾರೆ ಮತ್ತು ಜಿಲ್ಲೆಯಲ್ಲಿ ಇದೀಗ 510 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2021 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟು 2581 ಮಂದಿಗೆ ಕೋವಿಡ್ ಸೋಂಕು ತಗುಲಿತ್ತು. 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  139 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಶುಕ್ರವಾರ 857 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 806 ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಕೊಳ್ಳೇಗಾಲ ತಾಲೂಕಿನಿಂದ 19, ಚಾಮರಾಜನಗರ ತಾಲೂಕಿನಿಂದ 13, ಗುಂಡ್ಲುಪೇಟೆ ತಾಲೂಕಿನಿಂದ 09, ಹನೂರು ತಾಲೂಕಿನಿಂದ 06, ಯಳಂದೂರು ತಾಲೂಕಿನಿಂದ 01, ಇತರ ಜಿಲ್ಲೆಗಳಿಂದ 03 ಪ್ರಕರಣಗಳು ವರದಿಯಾಗಿವೆ.

ಇಂದಿನ ಪ್ರಕರಣಗಳು-51

Advertisement

ಇಂದು ಗುಣಮುಖ-38

ಒಟ್ಟು ಗುಣಮುಖ-2021

ಇಂದಿನ ಸಾವು-00

ಒಟ್ಟು ಸಾವು-50

ಸಕ್ರಿಯ ಪ್ರಕರಣಗಳು-510

ಒಟ್ಟು ಸೋಂಕಿತರು-2581

Advertisement

Udayavani is now on Telegram. Click here to join our channel and stay updated with the latest news.

Next