ಲಕ್ನೋ: ತೀವ್ರ ಆತಂಕಕಾರಿ ಘಟನೆಯೊಂದರಲ್ಲಿ ಮದರಸಾವೊಂದರಲ್ಲಿ ಒತ್ತೆಯಾಳುಗಳಾಗಿ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿದ್ದ 51 ಬಾಲಕಿಯರನ್ನು ಪೊಲೀಸರು ಶುಕ್ರವಾರ ರಕ್ಷಿಸಿದ್ದಾರೆ.
ಶಹದಾತ್‌ಗಂಜ್‌ನಲ್ಲಿರುವ ಮದರಸಾದಲ್ಲಿ 125ಕ್ಕೂ ಹೆಚ್ಚು ಬಾಲಕಿಯರು ವ್ಯಾಸಂಗ ಮಾಡುತ್ತಿದ್ದು ಆ ಪೈಕಿ ಶೋಷಣೆಗೊಳಗಾದ ಕೆಲ ಬಾಲಕಿಯರು ಮದರಸಾದ ಮ್ಯಾನೇಜರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮ್ಯಾನೇಜರ್‌ನನ್ನು ವಶಕ್ಕೆ ಪಡೆದಿದ್ದಾರೆ.
ವರದಿಯಾದಂತೆ ಬಾಲಕಿಯರು ತಾವು ಅನುಭವಿಸುತ್ತಿರುವ ಯಾತನೆಯನ್ನು ಚೀಟಿಯೊಂದರಲ್ಲಿ ಬರೆದು ಕಿಟಕಿಯಿಂದ ಹೊರಗೆ ಎಸಎದಿದ್ದು ಈ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಇಲಾಖೆ,ಮಕ್ಕಳ ಹಕ್ಕುಗಳ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಬಂಧಿತ ಆರೋಪಿ ಬಾಲಕಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಂತ್ರಸ್ತ ಬಾಲಕಿಯ ಪೋಷಕರು ಹೇಳಿಕೊಂಡಿದ್ದಾರೆ.