Advertisement

18 ಮಾಜಿ ದೇವದಾಸಿಯರಿಗೆ 51 ಎಕರೆ ಜಮೀನು ಹಂಚಿಕೆ

09:35 PM Jul 04, 2021 | Team Udayavani |

ಕುಷ್ಟಗಿ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನ ಮಾಜಿ ದೇವದಾಸಿಯರಿಗೆ ಸರ್ಕಾರ ಭೂ ಒಡೆತನ ಯೋಜನೆಯಡಿ 51 ಎಕರೆ ಜಮೀನು ಖರೀದಿಸಿದ್ದು, ಸರಕಾರ ಇದಕ್ಕಾಗಿ 2.70 ಕೋಟಿ ರೂ. ಖರ್ಚು ಮಾಡಿದೆ. ಕುಷ್ಟಗಿ ತಾಲೂಕಿನಲ್ಲಿ 671 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದ್ದು, ಅಜ್ಞಾನ-ಮೌಡ್ಯತೆ ಹಿನ್ನೆಲೆಯಲ್ಲಿ ಸಮಾಜದಲ್ಲಿನ ಅನಿಷ್ಠ ಪದ್ಧತಿಗೆ ಗುರಿಯಾಗಿದ್ದ ಮಹಿಳೆಯರಿಗೆ ಪುನರ್ವಸತಿ ಯೋಜನೆ ಮೂಲಕ ಮುಖ್ಯವಾಹಿನಿಗೆ ತರುವುದಕ್ಕಾಗಿ ಸರ್ಕಾರ ಈ ಯೋಜನೆ ರೂಪಿಸಿದೆ.

Advertisement

ಸರ್ಕಾರ ಈ ಫಲಾನುಭವಿಗಳಿಗೆ ಜಮೀನು ಖರೀದಿಸಲು ಘಟಕ ವೆಚ್ಚವಾಗಿ 15 ಲಕ್ಷ ರೂ. ಯೋಜನೆ ರೂಪಿಸಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜು.4ರಂದು ಫಲಾನುಭವಿಗಳಿಗೆ ಹಕ್ಕುಪತ್ರ ಹಸ್ತಾಂತರಿಸಿದ್ದಾರೆ. ಭೂ ಒಡೆತನ ಯೋಜನೆಯನ್ವಯ ಖುಷ್ಕಿ ಜಮೀನು ಆಗಿದ್ದರೆ 3 ಎಕರೆ ಮಿತಿ, ನೀರಾವರಿ ಜಮೀನು ಆಗಿದ್ದರೆ 2 ಎಕರೆ ಮಿತಿ ಇದೆ. ತಾಲೂಕಿನಲ್ಲಿ 4 ಎಕರೆ ಇಬ್ಬರು ಫಲಾನುಭವಿಗಳು, 16 ಫಲಾನುಭವಿಗಳಿಗೆ 3 ಎಕರೆ ಜಮೀನು ಭಾಗ್ಯ ಸಿಕ್ಕಿದೆ.

ವಿಮುಕ್ತ ಸಂಘಟನೆ ಶ್ರಮ: ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ವಿಮುಕ್ತ ದೇವದಾಸಿ ಮಹಿಳಾ ಸಂಘಟನೆ ಹೋರಾಟದ ಪ್ರತಿಫಲವಾಗಿ ದೇವದಾಸಿಯರಿಗೆ ಮೂಲಭೂತ ಸೌಕರ್ಯ, ವಸತಿ ಯೋಜನೆ, ದೇವದಾಸಿಯರ ಮಕ್ಕಳಿಗೆ ಉಚಿತ ಸಾಮೂಹಿಕ ವಿವಾಹ, ಸ್ವಾವಲಂಬನೆ ಹಿನ್ನೆಲೆಯಲ್ಲಿ ಸ್ವ ಉದ್ಯೋಗದ ವಿವಿಧ ತರಬೇತಿಗಳ ಮೂಲಕ ಪುನಃ ಅನಿಷ್ಠ ದೇವದಾಸಿ ಪದ್ಧತಿಗೆ ಜಾರದಂತೆ ಹಲವು ಯೋಜನೆಗಳು ಅನುಷ್ಠಾನಗೊಳಿಸಿದೆ. ಈ ಯೋಜನೆಗಳ ಅನುಷ್ಠಾನದಲ್ಲಿ ಕಲಾಲಬಂಡಿ ಯುವಕ ಚಂದಾಲಿಂಗಪ್ಪ, ಮಾಜಿ ದೇವದಾಸಿಯರಾದ ಪಡಿಯಮ್ಮ ಕ್ಯಾದಿಗುಂಪ, ದುಗ್ಗಮ್ಮ ದೋಟಿಹಾಳ ಅವರ ನೇತೃತ್ವದಲ್ಲಿ ಇದು ಸಾಧ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next