ಒಂದಾಗಿರುವ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ
ದೇಗುಲಕ್ಕೆ ಸಂದಾಯವಾದ ದೇಣಿಗೆ ಪ್ರಮಾಣ
ಗಣನೀಯವಾಗಿ ಏರಿಕೆ ಆಗಿದೆ. 2018-19ರ ವಿತ್ತೀಯ ವರ್ಷದಲ್ಲಿ ಒಟ್ಟು 507 ಕೋಟಿ ರೂ. ದೇಣಿಗೆ ಲಭ್ಯವಾಗಿದ್ದು, ಇದು ಕಳೆದ ಸಾಲಿಗಿಂತ 206 ಕೋಟಿ ರೂ. ಹೆಚ್ಚುವರಿ ಸಂಗ್ರಹ. 2017-18 ರ ವಿತ್ತವರ್ಷದಲ್ಲಿ 301 ಕೋಟಿ ರೂ. ಸಂಗ್ರಹವಾಗಿತ್ತು ಎಂದು ದೇಗುಲದ ಕಾರ್ಯನಿರ್ವಹಣಾ ಧಿಕಾರಿ ಅನಿಲ್ ಕುಮಾರ್ ಸಿಂಘಲ್ ಈ ಮಾಹಿತಿ ನೀಡಿದ್ದಾರೆ.
Advertisement
ದೇವಾಲಯಕ್ಕೆ ಅತ್ಯಂತ ಹೆಚ್ಚಿನ ಆದಾಯ ಲಭ್ಯವಾಗುವ ಬಗ್ಗೆ ಮಾತನಾಡಿದ ಸಿಂಘಲ್, ಅತಿ ಹೆಚ್ಚು ಹಣ ಹುಂಡಿಯಿಂದ ಲಭ್ಯವಾಗುತ್ತಿದೆ. ಈ ಬಾರಿ ತಿರುಪತಿ ದೇಗುಲದ ಹುಂಡಿಯಲ್ಲಿ 1,214 ಕೋಟಿ ರೂ. ಸಂಗ್ರಹ ವಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೊತ್ತ 67 ಕೋಟಿ ರೂ ಹೆಚ್ಚಳವಾಗಿದೆ. 2017-18ರ ವಿತ್ತ ವರ್ಷದಲ್ಲಿ ಹುಂಡಿಗೆ 1, 147 ಕೋಟಿ ರೂ. ಲಭ್ಯವಾಗಿತ್ತು. 2018-19ರಲ್ಲಿ ಅನ್ನ ಪ್ರಸಾದಂ ಟ್ರಸ್ಟ್‌ಗೆ 140 ಕೋಟಿ ರೂ. ಲಭ್ಯವಾಗಿದ್ದು, ಹಿಂದಿನ ವರ್ಷ 127 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನೊಂದೆಡೆ ಬಿಐಆರ್‌ಆರ್‌ಡಿ ಟ್ರಸ್ಟ್‌ಗೆ 21 ಕೋಟಿ ರೂ, ಎಸ್‌ವಿ ಸರ್ವ ಶ್ರೇಯ ಟ್ರಸ್ಟ್‌ಗೆ 10.40 ಕೋಟಿ ರೂ ಎಸ್‌ವಿ ವಿದ್ಯಾ ದಾನ ಟ್ರಸ್ಟ್‌ಗೆ 11.37 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
17 ಕೋಟಿ ರೂ. ಹಿಂದಿನ ವರ್ಷದ ಸಂಗ್ರಹ
1,147 ಕೋಟಿ ರೂ 2017-18ರಲ್ಲಿ ಸಂಗ್ರಹವಾದದ್ದು
140 ಕೋಟಿ ರೂ. ಅನ್ನಪ್ರಸಾದಂ ಟ್ರಸ್ಟ್ (2018-19)