ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 50,129 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 78,64,811ಕ್ಕೆ ಏರಿಕೆಯಾಗಿದೆ. ಈ ಸಮಯದಲ್ಲಿ 578 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 62,077 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 70,78,123ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಸದ್ಯ 6,68,154 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ದೇಶದಲ್ಲಿ ಇದುವರೆಗೆ 1,18,534 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಐಷಾರಾಮಿ ರೈಲು ಗೋಲ್ಡನ್ ಚಾರಿಯೆಟ್ ಮತ್ತೆ ಹಳಿಗಳಲ್ಲಿ ಸಂಚರಿಸಲು ಸಿದ್ಧ
ರಾಜ್ಯದಲ್ಲಿ ಶನಿವಾರ 4,780 ಹೊಸ ಪ್ರಕರಣಗಳು ವರದಿಯಾಗಿದೆ. 7153 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಹೊಸ ಸೋಂಕು ಪ್ರಕರಣಗಳು 10 ಸಾವಿರ ದಾಟಿದ್ದ ಬಳಿಕ ಕೆಲವು ದಿನಗಳಿಂದ ಆರೇಳು ಸಾವಿರ ಗಡಿಯಲ್ಲೇ ಇದ್ದವು. ಈಗ ಸರಿ ಸುಮಾರು ಮೂರು ತಿಂಗಳ ಬಳಿಕ ನಾಲ್ಕು ಸಾವಿರ ಆಸುಪಾಸಿಗೆ ಇಳಿಕೆಯಾಗಿದೆ.
ರಾಜ್ಯದಲ್ಲಿ ಕಳೆದ 11 ದಿನಗಳಲ್ಲಿ ಒಂದು ಲಕ್ಷದಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ ಏಳು ಲಕ್ಷ ಗಡಿ ದಾಟಿದೆ. ಪ್ರಸ್ತುತ ರಾಜ್ಯದ ಗುಣಮುಖ ದರ ಶೇ.87.8ಕ್ಕೆ ತಲುಪಿದೆ.