Advertisement
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಂಚಮಸಾಲಿ ಸಮಾಜ ಮೀಸಲಾತಿಗಾಗಿ ಹೋರಾಟ ನಿರಂತರ ನಡೆಸಿದೆ. ನಿರಂತರ ಹೋರಾಟಕ್ಕೆ ಸಮಾಜದಿಂದ ಬೆಂಬಲ ದೊರೆತಿದೆ. ಕಳೆದ 30 ವರ್ಷಗಳಿಂದ ಮೀಸಲಾತಿಯ ಹೋರಾಟ ನಡೆದಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಹೋರಾಟ ತೀವ್ರ ವಾಗಿತ್ತು. ಹೋರಾಟ ನಡೆದಿತ್ತು. ಈ ಸರ್ಕಾರದಲ್ಲಿ ನಮಗೆ ಮೀಸಲಾತಿ ದೊರೆಯುವ ಭರವಸೆ ಇತ್ತು. ಆದರೆ ಎರಡು ವರ್ಷ ಕಳೆಯುತ್ತಾ ಬಂದರೂ ನಮಗೆ ಭರವಸೆ ಸಿಗುತ್ತಿಲ್ಲ. ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ದವಲ್ಲ. ಈ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಮಗೆ ಸ್ಪಂದನೆ ಮಾಡದೇ ಇದ್ದಾಗ ವಕೀಲರ ಮೂಲಕ ಬೆಳಗಾವಿ ಸಮಾವೇಶದ ಹೋರಾಟ ಆರಂಭ ಮಾಡಿದವು. ಇದನ್ನರಿತು ಸಿಎಂ ಬೆಂಗಳೂರಲ್ಲಿ ಸಿಎಂ ಸಭೆ ಕರೆದರು. ನಮ್ಮ ಶಾಸಕರು ಸಿಎಂಗೆ ಒತ್ತಡ ಹಾಕಿದರು. ಆದರೆ ಸಿಎಂರಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಈಗ ಉಪ ಚುನಾವಣೆ ಇವೆ ಎಂದು ಹೇಳಿದರು. ಆ ನೀತಿ ಸಂಹಿತೆಗೂ ಚುನಾವಣೆಗೂ ಸಂಬಂಧ ಇಲ್ಲ ಹೇಳಿ ಭರವಸೆ ಕೊಡಿ ಎಂದೆವು. ಕನಿಷ್ಟ ಪಕ್ಷ ಎಲ್ಲ ಲಿಂಗಾಯತಕ್ಕೆ ಕೇಂದ್ರದಲ್ಲಿ ಓಬಿಸಿಗೆ ಶಿಫಾರಸ್ಸು ಮಾಡಿ ಎಂದವು. ಅದಕ್ಕೂ ಹಾರಿಕೆಯ ಉತ್ತರ ನೀಡಿದರು. ಹಾಗಾಗಿ ನಾವು ಕ್ರಾಂತಿಕಾರಿಯ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದರು.
Related Articles
Advertisement
ರಾಜ್ಯದಲ್ಲಿ ವಕ್ಫ್ ಆಸ್ತಿ ವಿಚಾರ, ರಾಜ್ಯದ ರೈತರ ಭೂಮಿಗೆ ಅನ್ಯಾಯ ಆದರೆ ನಮ್ಮ ಸಮಾಜವು ನಿಲ್ಲುತ್ತದೆ. ರೈತರ ಪರ ನಿಲುವು ತಾಳುವೆವು. ರೈತರ ಆಸ್ತಿಗಳ ಮೇಲೆ ಮಠ ಮಾನ್ಯಗಳ ಆಸ್ತಿಗಳ ಮೇಲೆ ವಕ್ಫ್ ಆಸ್ತಿ ನಮೂದು ತೆಗೆಯಬೇಕು. ಕೊಟ್ಟ ನೋಟಿಸ್ ಹಿಂಪಡೆಯಬೇಕು. ವಿಜಯಪುರದಲ್ಲಿ ಹೋರಾಟವೂ ನಡೆಯಿತು. ಕೇಂದ್ರ ಸಮಿತಿಯೂ ಬಂದು ಹೋಗಿದೆ ಕೇಂದ್ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಎಂದರು.
ಈ ವೇಳೆ ದೊಡ್ಡಬಸಪ್ಪ, ಕರಿಯಪ್ಪ ಮೇಟಿ, ಎಂ ಎಂ ಚಿತ್ತವಾಡಗಿ, ಡಾ. ಶಿವನಗೌಡ ಉಪಸ್ಥಿತಿ ಇದ್ದರು.