– ನಗದು ರಹಿತ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳದ ಕಂಪನಿಗಳಿಗೆ ದಿನಕ್ಕೆ 5,000 ರೂ. ದಂಡದ ಎಚ್ಚರಿಕೆ.
– ನಗದು ರಹಿತ ವಹಿವಾಟು ಉತ್ತೇಜನಕ್ಕೆ ಹೊಸ ಆದೇಶ ಜಾರಿ
Advertisement
ನವದೆಹಲಿ: ನಗದು ರಹಿತ ಆರ್ಥಿಕ ವಹಿವಾಟನ್ನು ಮತ್ತಷ್ಟು ಸರ್ವವ್ಯಾಪಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ವಾರ್ಷಿಕವಾಗಿ 50 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳು ತಮ್ಮಲ್ಲಿ ಡಿಜಿಟಲ್ ಪಾವತಿ ಸೌಲಭ್ಯಗಳನ್ನು 2020ರ ಜ. 31ರೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ, ದಿನವೊಂದಕ್ಕೆ ಆ ಕಂಪನಿಯ ಮೇಲೆ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಕಟ್ಟುನಿಟ್ಟಾದ ಆದೇಶ ನೀಡಿದೆ.