Advertisement
ಮೊದಲ ಲೋಕಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕೇವಲ ಕೋಟಿಯಲ್ಲಿದ್ದ ಚುನಾವಣಾ ವೆಚ್ಚ, ಈಗ ಸಾವಿರಾರುಕೋಟಿ ರೂ.ಆಗಿದೆ. ಮೊದಲ ಚುನಾವಣೆಯಲ್ಲಿ ಪ್ರತಿ ಮತದಾರನ ಮೇಲೆ 60 ಪೈಸೆ ವೆಚ್ಚ ಮಾಡಲಾಗಿದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಮತದಾರನ ಮೇಲೆ ಮಾಡಲಾದ ವೆಚ್ಚ 46.40 ಪೈಸೆ ಆಗಿತ್ತು. ಸ್ವಾತಂತ್ರಾéನಂತರ 1952ರಲ್ಲಿ ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆಗ ಸಂಸದರ ಸಂಖ್ಯೆ 401 ಇತ್ತು. ಅಂದು 17.32 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಚುನಾವಣೆಗೆ ಸರ್ಕಾರದಿಂದ
10.45 ಕೋಟಿ ರೂ.ಖರ್ಚು ಮಾಡಲಾಗಿತ್ತು. ಅದರಲ್ಲಿ ಪ್ರತಿ ಮತದಾರನ ಮೇಲೆ ಅಂದಾಜು 60 ಪೈಸೆ ವೆಚ್ಚ ಮಾಡಲಾಗಿತ್ತು.
ವೆಚ್ಚ 100 ಕೋಟಿ ರೂ.ದಾಟಿತ್ತು. 2004ರಲ್ಲಿ ನಡೆದ 12ನೇ ಲೋಕ ಸಭಾ ಚುನಾವಣೆಯಲ್ಲಿ ಒಟ್ಟು ಚುನಾವಣಾ ವೆಚ್ಚ ಸಾವಿರ ರೂ.ಗಳ ಗಟಿ ದಾಟಿತ್ತು. ಆಗ 1,113 ಕೋಟಿ ರೂ.ವೆಚ್ಚ ಮಾಡಲಾಗಿತ್ತು.
Related Articles
Advertisement
ವೆಚ್ಚ ಏನೆಲ್ಲ ಒಳಗೊಂಡಿರುತ್ತದೆಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸ್ಥಾಪನೆ,
ಮತಗಟ್ಟೆಗಳಿಗೆ ಬೇಕಾಗುವ ವ್ಯವಸ್ಥೆಗಳ ಪೂರೈಕೆ, ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಚುನಾವಣಾ ಸಿಬ್ಬಂದಿಗೆ ವೇತನ-ಭತ್ಯೆ, ಚುನಾವಣಾ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ, ಚುನಾವಣಾ ಸಾಮಗ್ರಿ ಸಾಗಾಣಿಕೆ, ಚುನಾವಣಾ ಸಿಬ್ಬಂದಿಗೆ ತರಬೇತಿ, ಇನ್ನಿತರ ಖರ್ಚುಗಳು ಒಟ್ಟಾರೆ ಚುನಾವಣಾ ವೆಚ್ಚದಲ್ಲಿ ಸೇರುತ್ತವೆ. ಲೋಕಸಭಾ ಚುನಾವಣೆಗೆ ಕಾನೂನು-ಸುವ್ಯವಸ್ಥೆಯ ವೆಚ್ಚ ಹೊರತುಪಡಿಸಿ ಉಳಿದೆಲ್ಲ ವೆಚ್ಚವನ್ನೂ ಕೇಂದ್ರ ಸರ್ಕಾರ ಭರಿಸುತ್ತದೆ. ಕಾನೂನು-ಸುವ್ಯವಸ್ಥೆಗೆ ಬೇಕಾಗುವ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸುತ್ತವೆ.