Advertisement

ರೈಲುಗಳ ಪ್ರಯಾಣಾವಧಿ ಕಡಿತ?

07:10 AM Oct 21, 2017 | Team Udayavani |

ನವದೆಹಲಿ: ಭಾರತದಲ್ಲಿ ಸಂಚರಿಸುವ ಸುಮಾರು 500 ರೈಲುಗಳ ಪ್ರಯಾಣಾವಧಿಯನ್ನು ಸುಮಾರು 2 ಗಂಟೆಗಳಷ್ಟು ಇಳಿಕೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಮುಂದಿನ ತಿಂಗಳು ಇದು ಜಾರಿಗೆ ಬರಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

ಇದೇ ಮೊದಲ ಬಾರಿಗೆ ರೈಲುಗಳ ಟ್ರಿಪ್‌ಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಜಾರಿಗೆ ತರಲಾಗುತ್ತಿದೆ. ಅದರಂತೆ, ನಿರ್ವಹಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೊದಲಿಗೆ 51 ರೈಲುಗಳಿಗೆ ನಿಗದಿತ ಸ್ಥಳಗಳನ್ನು ಬೇಗನೇ ತಲುಪು ವಂತೆ ಅವುಗಳ ಪ್ರಯಾಣಾವಧಿ ಇಳಿಸಲಾಗುತ್ತದೆ. ಆನಂತರ, 500 ರೈಲುಗಳಿಗೆ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next