Advertisement

ಮೆಕ್ಕೆಜೋಳ ಖರೀದಿಗೆ ಸರ್ಕಾರದಿಂದ 500 ಕೋಟಿ ರೂ. ಬಿಡುಗಡೆ

05:25 PM Nov 15, 2020 | Suhan S |

ಹೊಳಲ್ಕೆರೆ: ರಾಜ್ಯ ಸರಕಾರ ಎಪಿಎಂಸಿಗಳ ಮೂಲಕ ಮೆಕ್ಕೆಜೋಳವನ್ನು ಖರೀದಿಸಲಿದ್ದು,ಪ್ರತಿ ಕ್ವಿಂಟಲ್‌ಗೆ 1750 ರೂ. ಬೆಂಬಲ ಬೆಲೆನಿಗದಿಪಡಿಸಿದೆ. ಇದಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ತಾಲೂಕಿನ ಚಿಕ್ಕಜಾಜೂರಿನ ಎಪಿಎಂಸಿ ಉಪಕೇಂದ್ರದಲ್ಲಿನ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚಿಕ್ಕಜಾಜೂರಿನ ಉಪಕೇಂದ್ರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ 7 ವಾಣಿಜ್ಯ ಮಳಿಗೆಗಳನ್ನು ನಿರ್ಮಿಲಲಾಗಿದೆ. ರೈತರು ಇಲ್ಲಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರಿಗೆ ವರದಾನವಾಗಿದೆ. ರೈತನ ಬೆಳೆಗೆ ವೈಜ್ಞಾನಿಕ ಬೆಲೆ ದೊರೆತು ನೇರವಾಗಿ ಮಾರಾಟ ಮಾಡಲು ಮುಕ್ತ ಅವಕಾಶ ನೀಡಲಾಗಿದೆ. ಇದರಿಂದ ವಂಚನೆ ತಪ್ಪಲಿದ್ದು, ರೈತರಿಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು. ತಾಲೂಕಿನ ಹನುಮಂತ ದೇವರ ಕಣಿವೆಯಲ್ಲಿ ಮುಖ್ಯ ಎಪಿಎಂಸಿ ಕಚೇರಿ ಕಟ್ಟಡ, ರೈತರಿಗೆ ವಿಶ್ರಾಂತಿ ಗೃಹ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಂದಿದೆ. ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೋಟೆಹಾಳ್‌ನಲ್ಲಿ10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, 15 ಲಕ್ಷ ರೂ. ವೆಚ್ಚದಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಕೋಟೆಹಾಳ್‌ನ 10 ಎಕರೆ ಭೂಮಿಯಲ್ಲಿ 220 ಕೆ.ವಿ ವಿದ್ಯುತ್‌ ಸ್ಥಾವರ ನಿರ್ಮಾಣವಾಗಲಿದೆ. ಇದರಿಂದ ಮಲ್ಲಾಡಿಹಳ್ಳಿ, ಚಿಕ್ಕಜಾಜೂರು, ರಾಮಗಿರಿ, ಚಿತ್ರಹಳ್ಳಿ ಸೇರಿ ಎಲ್ಲಾ ವಿದ್ಯುತ್‌ ವಿತರಣಾ ಕೇಂದ್ರಗಳಿಂದ ವರ್ಷ ಪೂರ್ತಿ ವಿದ್ಯುತ್‌ ಪೂರೈಕೆಯಾಗಲಿದೆ ಎಂದು ತಿಳಿಸಿದರು.

ಕೊಡಗಹಳ್ಳಿಹಟ್ಟಿ ಕರಿಯಮ್ಮ ದೇವಿ ಸಮುದಾಯ ಭವನ, ಸರಕಾರಿ ಶಾಲೆಗಳ ಕೊಠಡಿ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ, ಅಂತಾಪುರದಲ್ಲಿ ಸಿಸಿ ರಸ್ತೆ, ಅಜ್ಜಿಕ್ಯಾತನಹಳ್ಳಿಯಲ್ಲಿ ಸಿಸಿ ರಸ್ತೆ, ಶಾಲಾ ಕೊಠಡಿ, ಶುದ್ಧ ನೀರಿನಘಟಕ, ಅಂಗನವಾಡಿ, ಕಾಮನಹಳ್ಳಿಯಲ್ಲಿ ಸಿಸಿ ರಸ್ತೆ, ನಂದಿಹಳ್ಳಿಯಲ್ಲಿ ಶಾಲಾ ಕೊಠಡಿ, ದಾಸರಹಳ್ಳಿಯಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಎಪಿಎಂಸಿ ಅಧ್ಯಕ್ಷ ಕುಮಾರ್‌ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದರು. ಜಿಪಂ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ, ಸದಸ್ಯರಾದ ಕುಮಾರ್‌, ಅಂಕಳಪ್ಪ, ಡಿ.ಸಿ. ಮೋಹನ್‌, ಮರುಳಸಿದ್ದೇಶ್ವರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next