ನವ ದೆಹಲಿ : ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಮುಂದಿನ ಮೂರು ತಿಂಗಳಲ್ಲಿ 500 ಮೆಡಿಕಲ್ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಿದೆ.
ಅದಕ್ಕೆ ಬೇಕಾಗುವ ವೆಚ್ಚವನ್ನು ಪಿಎಂ ಕೇರ್ಸ್ ಫಂಡ್ ಮೂಲಕ ಭರಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ.
ಹಗುರ ಯುದ್ಧ ವಿಮಾನ ತೇಜಸ್‌ಗಾಗಿ ಅಭಿವೃದ್ಧಿಪಡಿಸಿದ ಮೆಡಿಕಲ್ ಆಕ್ಸಿಜನ್ ತಂತ್ರಜ್ಞಾನವನ್ನೇ ಈ ಘಟಕಗಳಲ್ಲಿಯೇ ಬಳಸಲಾಗುತ್ತದೆ. ಬೆಂಗಳೂರಿನ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಕೊಯಮತ್ತೂರು ಮೂಲದ ಟ್ರಿಡೆಂಟ್ ನ್ಯುಮಾಟಿಕ್ಸ್ ಜತೆ ಸೇರಿ 380 ಘಟಕಗಳನ್ನು ಸ್ಥಾಪಿಸಲಿವೆ.
ಇದನ್ನೂ ಓದಿ :ಕನ್ನಡತಿ ಕೃತಿ ಕಾರಂತ್‌ಗೆ 2021ನೇ ಸಾಲಿನ ವೈಲ್ಡ್ ಇನ್ನೋವೇಟರ್ ಪ್ರಶಸ್ತಿ
ಪ್ರತಿ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸುವ 120 ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಅದಕ್ಕಾಗಿ ಡೆಹ್ರಾಡೂನ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ತಾಂತ್ರಿಕ ನೆರವು ನೀಡಲಿದೆ.