Advertisement

Share price; ಅಜ್ಜ ಖರೀದಿಸಿದ್ದ 500 ರೂ. ಷೇರು: ಮೊಮ್ಮಗ ಈಗ ಲಕ್ಷಾಧಿಪತಿ!

01:12 AM Aug 05, 2024 | Team Udayavani |

ಹೊಸದಿಲ್ಲಿ: ಚಂಡೀಗಢದ ವೈದ್ಯರೊಬ್ಬರಿಗೆ ಅವರ ಅಜ್ಜ 30 ವರ್ಷದ ಹಿಂದೆ ಖರೀದಿಸಿದ್ದ 500ರೂ. ಮೌಲ್ಯದ ಎಸ್‌ಬಿಐ ಷೇರು ಪತ್ರ ಈಗ ಸಿಕ್ಕಿದ್ದು, ಅದರ ಮೌಲ್ಯ ಈಗ 3.75 ಲಕ್ಷ ರೂ.ದಾಟಿದೆ! ಷೇರಿನ ಲಾಭಾಂಶ ಸೇರಿದರೆ ಈ ಮೊತ್ತ ಇನ್ನೂ ಹೆಚ್ಚಾಗುತ್ತದೆ. ಈ ಮಾಹಿತಿಯನ್ನು ವೈದ್ಯ ತನ್ಮಯ್‌ ಮೋತಿವಾಲ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 1994ರಲ್ಲಿ ನಮ್ಮ ಅಜ್ಜ 500ರೂ. ಮೌಲ್ಯದ ಷೇರು ಖರೀದಿಸಿ, ಮರೆತು ಬಿಟ್ಟಿದ್ದಾರೆ. ಅದರ ಮೌಲ್ಯ ಈಗ ಹೆಚ್ಚಳವಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next