Advertisement

ಹೆಂಡ್ತಿ ಸಿಕ್ಳು 5 ದಶಕ ಬಳಿಕ ನಡೀತು ಮದುವೆ!

03:45 AM Mar 06, 2017 | Team Udayavani |

ಕೈಮುರ್‌(ಬಿಹಾರ): 40 ವರ್ಷಗಳ ಬಳಿಕ ಮದುವೆಗೆ ವೇದಿಕೆ ಸಿದ್ಧಗೊಂಡ ಅಪರೂಪದ ಸಂಬಂಧ ಮಧ್ಯಪ್ರದೇಶದ ಗುರ್ಮಾರ ಹಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾದ ಬೆನ್ನಲ್ಲೇ, ಇದೀಗ ಅಂತಹುದೇ ಮತ್ತೂಂದು ಘಟನೆ ಬಿಹಾರದಿಂದ ವರದಿಯಾಗಿದೆ. 50 ವರ್ಷಗಳ ಬಳಿಕ ಮದುವೆಗೆ ಕುಗ್ರಾಮ ಬರ್‌ವಾನ್‌ ಕಾಲಾ ಸಾಕ್ಷಿಯಾಗಿದೆ!

Advertisement

ಫೆಬ್ರವರಿ ತಿಂಗಳ ಕಡೇ ದಿನ ಅಜಯ್‌ ಕುಮಾರ್‌ ಯಾದವ್‌ಗೆ ಈ ಕುಗ್ರಾಮದಲ್ಲಿ ಅದ್ದೂರಿ ಸ್ವಾಗತ ದೊರೆತಿದೆ. ವರನನ್ನು ಸಂಭ್ರಮದಿಂದ ಬರಮಾಡಿಕೊಂಡ ಊರಿನವರು, ತಮ್ಮೂರಿನ ನೀತು ಎಂಬಾಕೆಯನ್ನು ಮದುವೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಈ ಕುಗ್ರಾಮದ ಹಳ್ಳಿಗೆ ತೆರಳುವುದೇ ಭಾರಿ ಕಷ್ಟವಾಗಿತ್ತು. ದಾರಿಯೇ ಇಲ್ಲದ ಸ್ಥಿತಿ ಅವರದ್ದಾಗಿತ್ತು. ಈ ಮದುವೆಗಾಗಿಯೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಎದುರು ಹಾಕಿಕೊಂಡು, ಹೆಚ್ಚುಕಡಿಮೆ 6 ಕಿಲೋ ಮೀಟರ್‌ನಷ್ಟು ರಸ್ತೆ ನಿರ್ಮಿಸಿದರು. ಅದೆಷ್ಟೇ ಕಷ್ಟವಾದರೂ ಈ ಮದುವೆ ಆಗಬೇಕೆನ್ನುವುದು ಅವರ ಉದ್ದೇಶವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಜಯ್‌ ಯಾದವ್‌, “ಈ ಕುಗ್ರಾಮಕ್ಕೆ ರಸ್ತೆ ನಿರ್ಮಾಣ ಸಾಧ್ಯವಾಗದೇ ಇದ್ದಿದ್ದರೆ 
ನನ್ನ ಮದುವೆಯೂ ನಡೆಯು ತ್ತಿರಲಿಲ್ಲ. ನಾನೂ ಈ ಊರಿನ ಬ್ರಹ್ಮಚಾ ರಿಗಳಲ್ಲಿ ಒಬ್ಬನಾಗಿರುತ್ತಿದ್ದೆ’ ಎಂದು  ಮಾಧ್ಯಮ ಪ್ರತಿನಿಧಿಗಳ ಜತೆ ಹೇಳಿಕೊಂಡಿದ್ದಾರೆ.

ಬಿಹಾರದ ಜನ ಸಂಪರ್ಕವೇ ಇಲ್ಲದ, ಕುಗ್ರಾಮಗಳಲ್ಲಿ ಬರ್‌ವಾನ್‌ ಕಾಲಾ ಒಂದು. ಕೈಮುರ್‌ ಜಿಲ್ಲಾ ವ್ಯಾಪ್ತಿಯ ಅಧೌರಾ ಹಳ್ಳಿಗೆ ಸಮೀಪದಲ್ಲಿದೆ. ಪರ್ವತ ಶ್ರೇಣಿಯಲ್ಲಿರುವ ಊರು ಇದಾಗಿದ್ದು, ಬುಡಕಟ್ಟು ಜನಾಂಗದ ಕುಟುಂಬಗಳು ಇಲ್ಲಿ ವಾಸಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next