Advertisement
ಮುಂಬಯಿಯಲ್ಲಿಯೇ 1,635 ಸೋಂಕು ಖಚಿತವಾಗಿದೆ. ಹೀಗಾಗಿ, ದೇಶದ ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಮುಂಬಯಿಯಲ್ಲಿ ಕೋವಿಡ್ 19 ನಿಯಂತ್ರಣ ಸಾಧ್ಯವಾಗಿಲ್ಲವೇ ಎಂಬ ಆತಂಕ ವ್ಯಕ್ತವಾಗಿದೆ. ಸತತ ಎಂಟು ದಿನಗಳ ಕಾಲ ರಾಜ್ಯದಲ್ಲಿ ದಿನವೂ 2 ಸಾವಿರಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳು ದೃಢಪಟ್ಟಿವೆ.
Related Articles
Advertisement
ಸತತ 3ನೇ ದಿನ: ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಶನಿವಾರದಿಂದ ರವಿವಾರದ ಅವಧಿಯಲ್ಲಿ ದೇಶದಲ್ಲಿ 6,767 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಸತತ ಮೂರನೇ ದಿನ ಸೋಂಕಿನ ಸಂಖ್ಯೆ 6 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 147 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಗುಣ ಮುಖರಾಗುವವರ ಸಂಖ್ಯೆ 54,440ಕ್ಕೆ ಏರಿಕೆಯಾಗಿದೆ. ಹೀಗಾಗಿ ಅಂಥವರ ಶೇಕಡವಾರು ಪ್ರಮಾಣ ಕೂಡ 41.28ಕ್ಕೆ ಹೆಚ್ಚಿದೆ.
ವಾಕ್ಸಿನ್‌ನಂತೆ ಕೆಲಸ ಮಾಡಿದೆ:ಇನ್ನೊಂದೆಡೆ ದೇಶದಲ್ಲಿ ಜಾರಿಗೊಳಿಸಲಾಗಿ ರುವ ಲಾಕ್‌ಡೌನ್ ಮತ್ತು ಇತರ ನಿಯಮಗಳು ಸೋಂಕು ತಡೆಯುವಲ್ಲಿ ಕೆಲಸ ಮಾಡಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್ ತಿಳಿಸಿದ್ದಾರೆ. ಲಾಕ್‌ಡೌನ್‌ಗಿಂತ ಮೊದಲು ಸೋಂಕು ದ್ವಿಗುಣಗೊಳ್ಳುವ ಅವಧಿ 3.4 ದಿನ ಆಗಿತ್ತು. ಈಗ 13 ದಿನಗಳಿಗಿಂತ ಹೆಚ್ಚಾಗಿದೆ ಎಂದರು. ಜಗತ್ತಿನ ಇತರ ದೇಶಗಳಲ್ಲಿ ಸೋಂಕು ಸ್ಥಿತಿ ನಿಯಂತ್ರಣ ಸಾಧ್ಯವೇ ಇಲ್ಲ ಎಂದು ತಿಳಿದಾಗ ಲಾಕ್‌ಡೌನ್ ಮಾಡಲು ನಿರ್ಧರಿಸಲಾಯಿತು. ಸಿದ್ಧಗೊಂಡಿರಬೇಕು: ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಮತ್ತು ಇತರ ಸಂಬಂಧಿತ ಮೂಲಭೂತ ವ್ಯವಸ್ಥೆಗಳನ್ನು ಮುಂದಿನ ಎರಡು ತಿಂಗಳ ಪರಿಸ್ಥಿತಿ ಗಮನಿಸಿಕೊಂಡು ಮತ್ತಷ್ಟು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಹೀಗೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ತಮಿಳುನಾಡು, ಗುಜರಾತ್, ದಿಲ್ಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ ಮತ್ತು ರಾಜಸ್ಥಾನ ದೇಶದ ಒಟ್ಟು ಶೇ.70ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಸೂಚನೆ ಮಹತ್ವ ಪಡೆದಿದೆ. ಆರು ರಾಜ್ಯಗಳ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸ್ಥಳಗಳಲ್ಲಿ ನಿಕಟವಾಗಿ ಪರಿಸ್ಥಿತಿ ಗಮನಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕು ಎಂದಿದೆ.