Advertisement

ಉಳ್ಳಾಲದಲ್ಲಿ ಕೋವಿಡ್ ಅಟ್ಟಹಾಸ: ಒಂದೇ ದಿನ 50 ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢ

03:25 PM Jul 05, 2020 | keerthan |

ಉಳ್ಳಾಲ: ಕರ್ನಾಟಕ- ಕೇರಳ ಗಡಿ ಭಾಗದ ಉಳ್ಳಾಲದಲ್ಲಿ ಕೋವಿಡ್-19 ಸೋಂಕು ಆರ್ಭಟ ಮುಂದುವರಿದಿದೆ. ಇಂದು ಒಂದೇ ದಿನ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

Advertisement

ಅದರಲ್ಲೂ ಉಳ್ಳಾಲ ನಗರಸಭೆ ವ್ಯಾಪ್ತಿಯೊಂದರಲ್ಲೇ ಇಂದು ಒಂದೇ ದಿನ 48 ಕೋವಿಡ್ -19 ಸೋಂಕು ಪ್ರಕರಣಗಳು ದೃಢವಾಗಿದೆ. ರ್ಯಾಂಡಮ್ ಟೆಸ್ಟ್ ನಡೆಸಲಾದವರಲ್ಲಿ ಹೆಚ್ಚಿನವರಲ್ಲಿ ಸೋಂಕು ಪತ್ತೆಯಾಗಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಉಳ್ಳಾಲದಲ್ಲಿ ಸೋಂಕಿನ ಕಾರಣದಿಂದ ಮಹಿಳೆಯರಿಬ್ಬರು ಸಾವನ್ನಪ್ಪಿದ ಬಳಿಕ ಈವರಗೆ 160 ಅಧಿಕ ಮಂದಿಯಲ್ಲಿ ಕೋವಿಡ್-19 ಸೋಂಕು ತಾಗಿರುವುದು ಪತ್ತೆಯಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಜನರು ಲಾಕ್ ಡೌನ್ ದಿನವಾದ ಇಂದು ಮಾಸ್ಕ್ ಹಾಕದೇ ತಿರುಗಾಡುತ್ತಿರುವುದು ಕಂಡುಬಂದಿದೆ.

ನಗರದಲ್ಲಿ ಬಹಳಷ್ಟು ಮಂದಿ ಪೊಲೀಸರ ಕಣ್ತಪ್ಪಿಸಿ ವಾಹನಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರು. ಉಳ್ಳಾಲ ಜಂಕ್ಷನ್ ನಲ್ಲಿ ಕೆಲವರು ಮೀನು ಮಾರಾಟ ನಡೆಸುತ್ತಿದ್ದ ದೃಶ್ಯಗಳು ಕಂಡುಬಂತು.

Advertisement

ತೊಕ್ಕೊಟ್ಟು, ಕುತ್ತಾರು, ಉಳ್ಳಾಲ, ಕೋಟೆಕಾರು, ಬೀರಿ, ತಲಪಾಡಿ, ದೇರಳಕಟ್ಟೆ , ಮುಡಿಪು, ಕೊಣಾಜೆ, ಅಸೈಗೋಳಿ ಭಾಗಗಳಲ್ಲಿ ಪೊಲೀಸರು ಚೆಕ್ ಪಾಯಿಂಟ್ ಇರಿಸಿದ್ದಾರೆ. ಆಸ್ಪತ್ರೆ, ಹಾಲು, ಪತ್ರಿಕಾ ವಾಹನಗಳನ್ನು ಹೊರತುಪಡಿಸಿ ಅಗತ್ಯ ಕಾರ್ಯದ ನಿಮಿತ್ತ ತೆರಳುವ ವಾಹನಗಳನ್ನು ಬಿಟ್ಟರೆ, ಸುಖಾಸುಮ್ಮನೆ ತಿರುಗುವ ಮಂದಿಯನ್ನು ತಡೆದು ವಾಪಸ್ಸು ಕಳುಹಿಸಿದರು.

ಗಡಿಭಾಗ ತಲಪಾಡಿಯಲ್ಲಿ ವಾಹನಗಳು ಇಲ್ಲದೇ ದಿನನಿತ್ಯ ಪಾಸ್ ಪರಿಶೀಲನೆ ಬ್ಯುಸಿಯಾಗಿದ್ದ ಪೊಲೀಸರು ನಿರಾಳರಾಗಿದ್ದರು. ಬಸ್ಸುಗಳ ಓಡಾಟವೂ ಇರದೆ ರಸ್ತೆಗಳೆಲ್ಲಾ ಬಿಕೋ ಅನ್ನುತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next