ಬೆಂಗಳೂರು: ದೇಶದಲ್ಲಿ ಅಧ್ಯಯನವೊಂದರ ಪ್ರಕಾರ ಶೇ.50 ಸೋಮಾರಿಗಳಿದ್ದಾರೆ ಎಂದು ತಿಳಿದು ಬಂದಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ಮಾರಕ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ನಯನ ಸಭಾಂಗಣದಲ್ಲಿ ರಂಗಚಂದಿರ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ನಗರೀಕರಣ, ಆಧುನೀಕರಣದ ಜೊತೆಗೆ ಸೋಮಾರೀಕರ ಣವು ಬೆಳೆಯುತ್ತಿದೆ. ಕೆಲಸ ಮಾಡುವವರಿಗೆ ಕೆಲಸ ಮಾಡುವುದೇ ವಿಶ್ರಾಂತಿಯಾ ದರೆ, ಕೆಲಸ ಮಾಡದವರಿಗೆ ವಿಶ್ರಾಂತಿ ಪಡೆಯುವುದೇ ಕೆಲಸವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:- ಸಚಿವ ಈಶ್ವರಪ್ಪಗೆ ಘೇರಾವ್: ಗುತ್ತಿಗೆದಾರ ವಿರುದ್ದ ಕ್ರಮಕ್ಕೆ ಆಗ್ರಹ
ನಮ್ಮ ದೇಶದ ನೈಜ ಚಿತ್ರಣವನ್ನು ನೋಡಬೇಕಾ ದರೆ, ರೈಲು ಪ್ರಯಾಣ ಮಾಡಬೇಕು. ಶೌಚಾಲಯ ಸಮಸ್ಯೆ, ಕುಡಿಯುವ ನೀರು, ರಸ್ತೆಗಳಿಲ್ಲದಿರುವುದು, ಸುವ್ಯವಸ್ಥಿತ ಸಾರಿಗೆ ಸೌಲಭ್ಯಗಳಿಲ್ಲದಿರುವುದು ಸೇರಿ ದಂತೆ ಹತ್ತಾರು ಸಮಸ್ಯೆಗಳು ಸಿಗುತ್ತಾ ಹೋಗುತ್ತವೆ. ಇಂತಹ ಚಿತ್ರಣವನ್ನು ಬದಲಾಯಿಸಲು ಪ್ರತಿಯೊಬ್ಬರೂ ಆಲೋಚನೆ ಮಾಡಬೇಕಿದೆ ಎಂದರು.
ಪ್ರತಿಭಾ ಪುರಸ್ಕಾರ: ಇದೇ ವೇಳೆ ಪ್ರಧಾನಮಂತ್ರಿ ರಾಷ್ಟ್ರೀಯ ಪುರಸ್ಕಾರ ವಿಜೇತೆ ಪ್ರತ್ಯಕ್ಷ ಬಿ.ಆರ್., ಸಿಇಟಿ ಟಾಪರ್ ಮೇಘನ್ ಎಚ್.ಕೆ., ಬ್ಯಾಡ್ಮಿಂಟನ್ ಪಟು ಸಾಯಿ ಪ್ರತೀಕ್ ಕೆ., ಬಾಲ ಕಲಾವಿದ ಗೋಕುಲ ಸಹೃ ದಯ ಅವರನ್ನು ಸನ್ಮಾನಿಸಲಾಯಿತು. ಕಲಾ ಪೋಷಕ ಆರ್. ನರೇಂದ್ರಬಾಬು, ಟ್ರಸ್ಟ್‌ನ ಗೌರವಾಧ್ಯಕ್ಷ ಟೆಲಿಕಾಂ ದತ್ತಾತ್ರೇಯ, ಲೇಖಕಿ ಡಾ. ಎಚ್.ಎಲ್. ಪುಷ್ಪ, ಟ್ರಸ್ಟ್ ಸಂಚಾಲಕ ಜಿಪಿಒ ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.