Advertisement
ಹೊರಮಾವು ನಿವಾಸಿ ಮನದೀಪ್ (11) ಅಪಹರಣಕ್ಕೊಳಗಾದ ಬಾಲಕ. ಕೃತ್ಯ ಎಸಗಿದ ನೇಪಾಳ ಮೂಲದ ಗೌರವ್ ಸಿಂಗ್(50) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯ ಸಹೋದರನ ಪತ್ನಿ ದುರ್ಗಾ ಎಂಬಾಕೆಗಾಗಿ ಶೋಧ ನಡೆ ಯುತ್ತಿದೆ.
Related Articles
ಬಾಲಕನ ಅಪಹರಣ ಸಂಬಂಧ ಎಸಿಬಿ ನಿಂಗಪ್ಪ ಸಕ್ರಿ ನೇತೃತ್ವದಲ್ಲಿ 2 ತಂಡ ರಚಿಸಲಾಗಿತ್ತು. ಒಂದು ತಂಡ ಸ್ಥಳೀಯ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದರೆ, ಹೆಣ್ಣೂರು ಠಾಣೆ ಪಿಎಸ್‌ಐ ಲಿಂಗ ರಾಜು ತಂಡ ಆರೋಪಿಯ ಮೊಬೈಲ್ ಲೊಕೇಷನ್ ಆಧರಿಸಿ ಫಾರ್ಮ್ ಹೌಸ್ ಕಡೆ ಹೊರಟಿ ತ್ತು. ತಡರಾತ್ರಿ 2 ಗಂಟೆಗೆ ಗೌರವ್ ಸಿಂಗ್ ಕೆಲಸ ಮಾಡುತ್ತಿದ್ದ ಫಾರ್ಮ್ ಹೌಸ್‌ಗೆ ತೆರಳಿದ ತಂಡ ಪರಿಚಯಸ್ಥನ ಮೂಲಕ ಫಾರ್ಮ್ ಹೌಸ್ ಗೇಟ್ ತೆರೆಯಲು ಯತ್ನಿಸಿದ್ದಾರೆ. ಅದು ಸಾಧ್ಯವಾಗ ದಿದ್ದಾಗ, ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸ್ ಜೀಪ್ ಬಳಸಿ ಕಾಂಪೌಂಡ್ ಹಾರಿ ಮನೆಗೆ ನುಗ್ಗಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಲಕನಿರುವ ಕೊಠಡಿಗೆ ತೆರಳಿ ಮನದೀಪ್ ನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದರು.
Advertisement
ಅಪಹರಣಕ್ಕೆ ಮೊದಲೇ ಸಂಚುಆರೋಪಿ ಗೌರವ್ ಸಿಂಗ್ ಫಾರ್ಮಹೌಸ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ದುಡಿದ ಹಣ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಅಪಹರಣಕ್ಕೊಳಗಾದ ಬಾಲಕನ ಮನೆ ಸಮೀಪದ ಲ್ಲಿರುವ ಅತ್ತಿಗೆಗೆ ಹಣದ ಆಮಿಷವೊಡ್ಡಿ ಬಾಲಕನ ಅಪಹರಣದ ಸಂಚು ರೂಪಿಸಿದ್ದಾನೆ. ಬಳಿಕ ಮಹಿಳೆ ಪುಸಲಾಯಿಸಿ ಬಾಲಕನನ್ನು ಕರೆದೊಯ್ದಿದ್ದಾಳೆ ಎಂದು ಪೊಲೀಸರು ಹೇಳಿದರು. ಗೌರವ್ ಸಿಂಗ್ ಸಹೋದರನ ಪತ್ನಿ ದುರ್ಗಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ.