ಎಂಟು ಶಾಖೆಗಳಿಂದ ವಿವಿಧ ಯೋಜನೆಗಳ 60 ಫಲಾನುಭವಿಗಳಿಗೆ ಒಂದೇ ದಿನ 50 ಲಕ್ಷ ರೂ. ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಎಸ್.ವಿ. ಕುಲಕರ್ಣಿ ಹೇಳಿದರು.
Advertisement
ನಗರದ ಶಾರದಾ ರುಡ್‌ಸೆಟ್‌ನಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಪ್ರಯುಕ್ತ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಯೋಜಿಸಿದ್ದ ಗ್ರಾಮೀಣ ಆರ್ಥಿಕ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಹೈನುಗಾರಿಕೆ ಹಾಗೂ ಕೃಷಿಯೇತರ ಚಟುವಟಿಕೆಗಾಗಿ ಎಸ್‌ಸಿ-ಎಸ್‌ಟಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಾಲ ಕೊಡಲಾಗಿದೆ. ಜಿಲ್ಲೆಯ 54 ಶಾಖೆಗಳಲ್ಲೂ ಕನಿಷ್ಠ ತಲಾ ಐದು ಜನರಿಗೆ ಸಾಲ ವಿತರಿಸಲಾಗಿದೆ ಎಂದರು. ಬ್ಯಾಂಕ್ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡಗೆ ನೀಡುತ್ತಿದೆ ಎಂದು ಹೇಳಿದರು.
ಮಾತನಾಡಿ, ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವಿವಿಧ ಯೋಜನೆಗಳಡಿ ಸಾಲ ಒದಗಿಸುತ್ತಿದೆ. ಫಲಾನುಭವಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೈನುಗಾರಿಕೆ, ಪಶು ಸಂಗೋಪನೆ ಕೈಗೊಳ್ಳಲು ಉದ್ದೇಶಿಸಿರುವ ಫಲಾನುಭವಿಗಳು ವಿಶ್ವವಿದ್ಯಾಲಯದ ಪದವೀಧರರಿಂದ ಅಗತ್ಯ ಮಾಹಿತಿ ಹಾಗೂ ತಾಂತ್ರಿಕ ನೆರವು ಪಡೆಯಬಹುದು ಎಂದು ಹೇಳಿದರು.
Related Articles
ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ವಿವಿಧ ಸಾಲ ಸೌಲಭ್ಯಗಳನ್ನು ಅರ್ಹ ಗ್ರಾಹಕರಿಗೆ
ತಲುಪಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
Advertisement
ಬ್ಯಾಂಕ್ ವತಿಯಿಂದ ಇಲ್ಲಿನ ನವಜೀವನ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಗೆ ನೀರು ಶುದ್ಧೀಕರಣ ಯಂತ್ರ ಹಾಗೂ ಮಕ್ಕಳಿಗೆ ಆಟಿಕೆಗಳನ್ನು ವಿತರಿಸಲಾಯಿತು. ಬ್ಯಾಂಕ್‌ನ ಗುಂಪಾ ಶಾಖೆಯ ವ್ಯವಸ್ಥಾಪಕ ದತ್ತಾತ್ರೇಯ ಕುಲಕರ್ಣಿ ಸ್ವಾಗತಿಸಿದರು. ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ನರಸಪ್ಪ ಜಿ. ನಿರೂಪಿಸಿದರು. ಹಿರಿಯ ವ್ಯವಸ್ಥಾಪಕ ಕೆ.ವಿ. ನಾಯ್ಕಲ್ ವಂದಿಸಿದರು.