Advertisement

GAIL: 50 ಲಕ್ಷ ಲಂಚ: ಐವರು ಗೈಲ್‌ ಅಧಿಕಾರಿಗಳ ಸೆರೆ

09:36 PM Sep 05, 2023 | Team Udayavani |

ನವದೆಹಲಿ: ಐವತ್ತು ಲಕ್ಷ ರೂ. ಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಅನಿಲ ಪ್ರಾಧಿಕಾರ (ಗೈಲ್‌)ದ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಬಿ.ಸಿಂಗ್‌ ಅವರನ್ನು ಸಿಬಿಐ ಬಂಧಿಸಿದೆ. ಅವರ ಜತೆಗೆ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಮಂಗಳವಾರ ತಿಳಿಸಿದೆ.

Advertisement

ಶ್ರೀಕಾಕುಳಂನಿಂದ ಆಂಗುಲ್‌ ಮತ್ತು ವಿಜಯಪುರದಿಂದ ಔರಿಯಾ ವರೆಗೆ ಪೈಪ್‌ಲೈನ್‌ ಅಳವಡಿಸುವ ಎರಡು ಯೋಜನೆಗಳಿಗೆ ಕಂಪನಿಯೊಂದರ ಪರವಾಗಿ ಗುತ್ತಿಗೆ ನೀಡುವ ವಿಚಾರದಲ್ಲಿ ಈ ಮೊತ್ತ ಪಾವತಿಯಾಗಿತ್ತು ಎಂದು ಆರೋಪಿಸಲಾಗಿದೆ. ದೇಶದ ಹಲವು ಸ್ಥಳಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯವನ್ನೂ ಸಿಬಿಐ ನಡೆಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next