Advertisement

11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

08:33 PM Jan 16, 2022 | Team Udayavani |

ಕುಷ್ಟಗಿ: ಕುಷ್ಟಗಿಯ ಹನ್ನೊಂದು ವರ್ಷದ ಅವಳಿ ಸಹೋದರರು ಭಾರ ಎತ್ತುವ ಸಾಹಸ ಪ್ರದರ್ಶನದಲ್ಲಿ 50 ಕೆ.ಜಿ. ಚೀಲ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ.

Advertisement

ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದ ನಿವಾಸಿ ಮರಸಣ್ಣಭೀ. ತಾಳದ ಅವರ ಅವಳಿ ಮಕ್ಕಳಾದ ಅಜಯ್- ವಿಜಯ್ ಇಲ್ಲಿನ ಅಜಯ್ ಅಕ್ಷರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾರೆ.

ಭಾನುವಾರ ನಡೆದ ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 50 ಕೆ.ಜಿ. ಧಾನ್ಯ ದ ಚೀಲ ಎತ್ತುವ ಮೂಲಕ ಅಲ್ಲಿದ್ದವರನ್ನು ನಿಬ್ಬೇರಗಾಗಿಸಿದ್ದಾರೆ.

ಹನ್ನೊಂದು ವರ್ಷದ ಅವಳಿ ಸಹೋದರರು ತಮ್ಮ ಸಾಮಾರ್ಥ್ಯ ಮೀರಿ 50 ಕೆಜಿ ಭಾರ ಎತ್ತಿದ್ದಾರೆ. ಯುವಕರನ್ನು ನಾಚಿಸುವಂತೆ 50 ಕೆ.ಜಿ. ಭಾರವನ್ನು ಎತ್ತುವಾಗ ತಿಣಕಾಡುವ ಇಂದಿನ ದಿನಮಾನಗಳಲ್ಲಿ 50 ಕೆ.ಜಿ. ಭಾರವನ್ನು ಈ ಅವಳಿ ಸಹೋದರರು, ಸಲೀಸಾಗಿ ಎತ್ತಿ ಭಾರ ಎತ್ತುವ ಕ್ರೀಡೆಯಲ್ಲಿ ಭವಿಷ್ಯದ ಕ್ರೀಡಾಪಟುಗಳ ಭರವಸೆ ಮೂಡಿಸಿದ್ದಾರೆ.

ಅಜಯ್- ವಿಜಯ್ ಅವಳಿ ಸಹೋದರರು, ಫಿಟ್ನೆಸ್ ಗೆ ಆದ್ಯತೆ ನೀಡಿದ್ದು, ದಿನವೂ ಕಸರತ್ತಿನ ವ್ಯಾಯಾಮದಲ್ಲಿ‌ನಿರತರಾಗಿದ್ದು ಸದಾ ಲವಲವಿಕೆಯಂದಿದ್ದಾರೆ. ಈ ಅವಳಿ ಸಹೋದರರ ಭಾರ ಎತ್ತಿದ ಭೀಮಣ್ಣನ ಮೊಮ್ಮಕ್ಕಳ ಸಹಾಸ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು

Advertisement

Udayavani is now on Telegram. Click here to join our channel and stay updated with the latest news.

Next