Advertisement
ಶುಕ್ರವಾರ ಸಂಜೆ ತಾಲೂಕಿನ ಎರೆಕೊಪ್ಪಿ ಗ್ರಾಮದ ಹೊಲವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಿಸಿದ ಸಾಲಮನ್ನಾದ ಹಣವನ್ನು ಬ್ಯಾಂಕ್‌ನವರು ಸಾಲದ ಬಡ್ಡಿಗೆ ಮುರಿದುಕೊಳ್ಳುತ್ತಿದ್ದಾರೆ ಎಂದು ರೈತರು ದೂರಿದಾಗ, ಸರ್ಕಾರ ಮಾಡಿದ ಮನ್ನಾ ಹೊರತುಪಡಿಸಿ ಇರುವ ಸಾಲಕ್ಕೆ ರಿಯಾಯಿತಿ ನೀಡುವಂತೆ ಸರ್ಕಾರ ಈಗಲೂ ಬ್ಯಾಂಕ್‌ಗಳ ಜತೆ ಚರ್ಚೆ ಮುಂದುವರಿಸಿದೆ ಎಂದರು.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹೆಸರೂರಿನ ರೈತರೋರ್ವರಿಗೆ ಬ್ಯಾಂಕ್ ನೀಡಿರುವ ನೋಟಿಸ್ ವಾಪಸ್ ಪಡೆದ ಬಗ್ಗೆ ಹಾಗೂ ಬ್ಯಾಂಕ್ ಸಾಲ ತುಂಬಲು ರೈತರಿಗೆ ರಿಯಾಯಿತಿ ನೀಡಿದ ಬಗ್ಗೆ ರೈತರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮೊಬೈಲ್‌ನಲ್ಲಿದ್ದ ಬ್ಯಾಂಕ್ ನೋಟಿಸ್ ನೋಡಿ “ಮುಂಡೆ ಮಕ್ಕಳು ರೈತರಿಗೆ ಇಂಗ್ಲಿಷ್‌ನಲ್ಲಿ ನೋಟಿಸ್ ಕಳುಹಿಸಿದ್ದಾರೆ. ಪಾಪ ರೈತರಿಗೆ ಇಂಗ್ಲಿಷ್ ಓದಲು ಬರುತ್ತಾ?’ ಎಂದು ಟೀಕಿಸಿದ್ದು, ನಗೆಗಡಲಲ್ಲಿ ತೇಲುವಂತೆ ಮಾಡಿತು.