Advertisement

50ರ ಸಂಭ್ರಮದಲ್ಲಿ ‘ಹೊಂದಿಸಿ ಬರೆಯಿರಿ’

10:49 AM Apr 04, 2023 | Team Udayavani |

ರಾಮೇನಹಳ್ಳಿ ಜಗನ್ನಾಥ್‌ ಸಾರಥ್ಯದ ಹೊಂದಿಸಿ ಬರೆಯಿರಿ ಸಿನಿಮಾ “ಹಾಫ್ ಸೆಂಚುರಿ ’ ಬಾರಿಸಿದೆ. ಫೆಬ್ರವರಿ 10ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಶೋ ಹೆಚ್ಚಿಸಿಕೊಂಡು ಹೌಸ್‌ಫ‌ುಲ್‌ ಪ್ರದರ್ಶನ ಕಂಡಿರುವ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ.

Advertisement

ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟ ಮೂಲಕ ಜಾಲಿಯಾಗಿ ಸಾಗುವ ಹೊಂದಿಸಿ ಬರೆಯಿರಿ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ:ಉಳ್ಳಾಲ: ಡಿವೈಎಫ್ಐನಿಂದ ಹರೇಕಳ ಸೇತುವೆ ಗೇಟ್ ತೆರವು; ಸಂಚಾರಕ್ಕೆ ಮುಕ್ತ

ಪ್ರವೀಣ್‌ ತೇಜ್‌, ನವೀನ್‌ ಶಂಕರ್‌, ಶ್ರೀ ಮಹದೇವ್‌, ಅನಿರುದ್ಧ್ ಆಚಾರ್ಯ, ಭಾವನಾ ರಾವ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಅರ್ಚನಾ ಜೋಯಿಸ್‌ ಸೇರಿದಂತೆ ಹಲವರು ನಟಿಸಿರುವ ಸಿನಿಮಾವನ್ನು ರಾಮೇನಹಳ್ಳಿ ಜಗನ್ನಾಥ್‌ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ಮಿಸಿ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next