Advertisement

Shocking: 50ಕ್ಕೂ ಹೆಚ್ಚು ಹಸುಗಳನ್ನು ನದಿಗೆ ಎಸೆದ ದುರುಳರು! ಮೂವರ ಬಂಧನ

09:24 AM Aug 29, 2024 | Team Udayavani |

ಸತ್ನಾ: ಉಕ್ಕಿ ಹರಿಯುತ್ತಿರುವ ನದಿಯೊಂದಕ್ಕೆ ದುಷ್ಕರ್ಮಿಗಳು 50ಕ್ಕೂ ಹೆಚ್ಚು ಹಸುಗಳನ್ನು ತಳ್ಳಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಸತ್ನಾದಲ್ಲಿನ ರೈಲ್ವೇ ಸೇತುವೆಯೊಂದರ ಬಳಿ ದುಷ್ಕರ್ಮಿಗಳು ಹಸುಗಳನ್ನು ನದಿಗೆ ತಳ್ಳುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ನಾಲ್ವರ ಮೇಲೆ ಭಾರತೀಯ ನ್ಯಾಯ ಸಂಹಿತೆಯಲ್ಲಿನ ಗೊ ಹತ್ಯೆ ನಿಷೇಧ ಕಾನೂನಿನ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

ವಿನೋದ್‌ ಪರಾಶರ್‌ ಎಂಬ ವ್ಯಕ್ತಿಯು ತಾನು ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿದ್ದು, ಈತನ ಹೇಳಿಕೆ ಮೇರೆಗೆ ಬೇಟಾ ಬಗ್ರಿ, ರವಿ ಬಗ್ರಿ, ರಾಮ್‌ ಪಾಲ್‌ ಚೌಧರಿ, ರಾಜುಲು ಚೌಧರಿ ಎಂಬವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದು. ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಒಂದು ವರದಿ ಪ್ರಕಾರ, 20 ಹಸುಗಳು ಈಗಾಗಲೇ ಮೃತಪಟ್ಟಿವೆ. ಮಂಗಳವಾರ ಘಟನೆ ನಡೆದಿದೆ ಎನ್ನಲಾಗಿದ್ದು, ಮಾಹಿತಿಯನ್ನು ಇನ್ನೂ ಪರಿಶೀಲನೆ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Stake In Swiggy: ನಟ ಅಮಿತಾಭ್‌ ಬಚ್ಚನ್‌ ಕುಟುಂಬದಿಂದ ಸ್ವಿಗ್ಗಿ ಕಂಪೆನಿ ಷೇರು ಖರೀದಿ…

Advertisement
Advertisement

Udayavani is now on Telegram. Click here to join our channel and stay updated with the latest news.

Next