Advertisement
ಸರಕಾರಿ ಆಸ್ಪತ್ರೆಯಲ್ಲಿ ಪ್ರಸಕ್ತ ಒಟ್ಟು 75 ಹಾಸಿಗೆಗಳಿದ್ದು, ಅವುಗಳ ಪೈಕಿ 50 ಆಕ್ಸಿನೇಟೆಡ್ ಬೆಡ್ ಸಿದ್ಧಪಡಿಸಲಾಗಿದೆ. ಪ್ರಸಕ್ತ 24 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 10 ಬೆಡ್‌ಗಳನ್ನು ಕೋವಿಡ್ ಸಂಶಯಾಸ್ಪದ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಐಸಿಯುವಿನಲ್ಲಿ 3 ಬೆಡ್‌ಗಳಿದ್ದು ಅಗತ್ಯ ಆಧರಿಸಿ ಬಳಕೆ ಮಾಡಲಾಗುತ್ತಿದೆ.
Related Articles
Advertisement
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ಗೆ 2 ವೈದ್ಯರನ್ನು, ಓರ್ವ ಸ್ಟಾಫ್ ನರ್ಸ್ ಅವರನ್ನು ನೇಮಿಸಲಾಗಿದೆ. ಪ್ರಸಕ್ತ 7 ಮಂದಿ ವೈದ್ಯರಿದ್ದಾರೆ.
ಒಟ್ಟು 24 ಸ್ಟಾಫ್ ನರ್ಸ್‌ಗಳ ಹುದ್ದೆಯ ಪೈಕಿ 16 ಮಂದಿಯಿದ್ದು ಉಳಿದ 4 ಹುದ್ದೆ ಎನ್‌ಆರ್‌ಎಚ್‌ಎಂ ಮೂಲಕ ಪಡೆಯ ಲಾಗಿದೆ. ಹೀಗಾಗಿ 20 ನರ್ಸ್ ಗಳು ಸೇವೆ ಸಲ್ಲಿಸುತ್ತಿದ್ದಾರೆ. ಡಿ ಗ್ರೂಪ್ ಪೈಕಿ ಓರ್ವ ಸರಕಾರಿ ಹಾಗೂ 15 ಮಂದಿ ಅರೆ ಗುತ್ತಿಗೆಯಲ್ಲಿ ನೇಮಿಸಲಾಗಿದೆ. 1938 ಮಂದಿಗೆ 2ನೇ ಡೋಸ್ ಬಾಕಿ ಪ್ರಸಕ್ತ ವ್ಯಾಕ್ಸಿನೇಶನ್ ಖಾಲಿಯಾಗಿದೆ.
ಮೇ 5ರಂದು ಪೂರೈಕೆಯಾಗುವ ಕುರಿತು ಆರೋಗ್ಯ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಜ.16ರಿಂದ ಕೊವಿಶೀಲ್ಡ್ 3,040 ಡೋಸ್, ಕೋವ್ಯಾಕ್ಸಿನ್ 860 ಡೋಸ್ ಒದಗಿಸಲಾಗಿದೆ. ಕೊವಿಶೀಲ್ಡ್ ಮೊದಲ ಡೋಸ್ 2,118 ಮಂದಿಗೆ, 2ನೇ ಡೊಸ್ 838 ಮಂದಿ ಪಡೆದಿದ್ದಾರೆ. ಕೋವ್ಯಾಕ್ಸಿನ್ ಮೊದಲ ಡೋಸ್ 691 ಮಂದಿ, 2ನೇ ಡೋಸ್ 33 ಮಂದಿ ಪಡೆದಿದ್ದಾರೆ. ಒಟ್ಟು 1,280 ಮಂದಿಗೆ ಕೊವಿಶೀಲ್ಡ್ ಹಾಗೂ 658 ಮಂದಿಗೆ ಕೋವ್ಯಾಕ್ಸಿನ್ 2ನೇ ಡೋಸ್ ನೀಡಲು ಬಾಕಿ ಉಳಿದಿದೆ. ಮೇ ತಿಂಗಳಲ್ಲಿ ಪೂರೈಕೆಯಾಗುವ ವ್ಯಾಕ್ಸಿನ್ 1,938 ಮಂದಿಗೆ ನೀಡಿದ ಬಳಿಕವೇ 18 ವಯೋಮಿತಿಯ ಮೇಲ್ಪಟ್ಟವರಿಗೆ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
100 ಕೆ.ವಿ. ಜನರೇಟರ್ ಆವಶ್ಯಕತೆ :
ಪ್ರಸಕ್ತ ತಾಲೂಕು ಆಸ್ಪತ್ರೆಯಲ್ಲಿ 35 ಕೆ.ವಿ. ಜನರೇಟರ್ ವ್ಯವಸ್ಥೆಯಿದೆ. ಒಟ್ಟು 6 ಡಯಾಲಿಸಿಸ್ ಯಂತ್ರಗಳು ಕಾರ್ಯಾಚರಿಸುವುದರಿಂದ 18ಗಂಟೆಯಷ್ಟು ಯಂತ್ರ ಕೆಲಸ ನಿರ್ವಹಿಸುತ್ತಿದೆ.
68 ಮಂದಿಗೆ ಡಯಾಲಿಸಿಸ್ : ಒಟ್ಟು 68 ಮಂದಿ ಡಯಾಲಿಸಿಸ್ ರೋಗಿಗಳಿದ್ದಾರೆ. ಹೀಗಾಗಿ 100 ಕೆ.ವಿ. ಜನರೇಟರ್ ಅಳವಡಿಸಿದಲ್ಲಿ ವಿದ್ಯುತ್ ವ್ಯತ್ಯಯವಾದರೂ ಯಂತ್ರಗಳ ಬಳಕೆಗೆ ಸರಾಗವಾಗಲಿದೆ.
-ವಿಶೇಷ ವರದಿ