Advertisement
ಅಗಸ್ಟ್ 17 ರಂದು ಕಾಮುಕನ ಅಟ್ಟಹಾಸಕ್ಕೆ ನಲುಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ತಾಯಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯ ಸಿಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.Related Articles
ಆರೋಪಿ ಮಲ್ಲಿಕಾರ್ಜುನ್ ಮನೆ ಮಾಲಿಕನಾಗಿದ್ದು,ಚಂದನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ, ಮಗುವನ್ನು ನೋಡಿ ಕೊಳ್ಳಲು ಚಂದನಾ ಬಳಿ ನೀಡಲಾಗುತ್ತಿತ್ತು. ಈ ವೇಳೆ ಕಾಮಾಂಧನಾಗಿ ಹೇಯ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
Advertisement
ಗುಪ್ತಾಂಗಕ್ಕೆ ರಾಡ್ ಇರಿದಿದ್ದ ಕ್ರೂರಿ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ರಾಡ್‌ನಿಂದ ಇರಿದಿದ್ದ ಎಂದು ತನಿಖೆಯ ವೇಳೆ ಕಂಡು ಬಂದಿದೆ. ಮೊದಲೇ ಅಲ್ಸರ್‌ನಿಂದ ಬಳಲುತ್ತಿದ್ದ ಮುಗು ಗಾಯದಿಂದ ಇನ್ನಷ್ಟು ಘಾಸಿ ಗೊಂಡು ಸಾವನ್ನಪ್ಪಿದೆ.