ಎಚ್.ಡಿ.ಕೋಟೆ: ಅರಣ್ಯದಲ್ಲಿ ಕುಡಿಯುವ ನೀರಿನ ಕುಡಿಯುವ ನೀರಿಗಾಗಿ ಅರಣ್ಯದಿಂದ ಹೊರಬಂದ ಹೆಬ್ಬಳ್ಳದಲ್ಲಿ ಶೇಖರಣೆಯಾಗಿದ್ದ ನೀರು ಕುಡಿದ ಪರಿಣಾಮ 5 ಜಿಂಕೆ ಹಾಗೂ 7 ಕಾಡುಕುರಿಗಳು ಜಿ.ಎಂ.ಹಳ್ಳಿ ಹೊರವಲಯದಲ್ಲಿ ಮೃತಪಟ್ಟಿವೆ. ಜಿಂಕೆಗಳು ಹಾಗೂ ಕಾಡುಕುರಿಗಳು ಮೈತಪಟ್ಟಿರುವ ರೀತಿ ನನೋಡಿದರೆ ದುಷ್ಕರ್ಮಿಗಳು ಕುಡಿಯುವ ನೀರಿಗೆ ಅಥವಾ ಆಹಾರಕ್ಕೆ ವಿಷ ಬೆರೆಸಿಕೊಂದಿರುವ ಶಂಕೆ ಇದೆ.
ಬುಧವಾರ ತಡರಾತ್ರಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಮೇಟಿಕುಪ್ಪೆ ಅರಣ್ಯ ಪ್ರದೇಶದಿಂದ ಬಂದಿರುವ ಜಿಂಕೆಗಳು ಹಾಗೂ ಕಾಡು ಕುರಿಗಳು ಹಿಂಡು ಜಿ.ಎಂ.ಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಮೀನಿನ ಮಾರ್ಗದಲ್ಲಿ ಹಾದು ಹೋಗಿರುವ ಹೆಬ್ಬಳದ ಅಂಚಿನಲ್ಲಿ ನಿಂತಿರುವ ನೀರು ಕುಡಿದಿವೆ.
ಅಲ್ಲಿಂದ ಕೆಲವೇ ಮೀಟರ್ ಅಂತರದಲ್ಲಿರುವ ಜಮೀನುಗಳಲ್ಲಿ 5 ಜಿಂಕೆಗಳು 7 ಕಾಡು ಕುರಿಗಳು ಸೇರಿದಂತೆ ಒಟ್ಟು 12 ವನ್ಯಜೀವಿಗಳು ಮೃತಪಟ್ಟಿವೆ. ಸಾಯುವ ಮುನ್ನ ಜಿಂಕೆ ಮತ್ತು ಕಾಡುಕುರಿಗಳ ಬಾಯಿಯಿಂದ ನಾಲೆಗೆ ಹೊರ ಚಾಚಿದ್ದು, ಕೊಂಚ ರಕ್ತಸ್ರಾವವೂ ಆಗಿದೆ. ಅಲ್ಲದೆ ಸಾಯುವ ಮುನ್ನ ಪ್ರಾಣಿಗಳು ಮೃತಪಟ್ಟಿರುವ ಸ್ಥಳದಲ್ಲಿ ಒದ್ದಾಡಿರುವ ಕುರುಹುಗಳಿವೆ.
ಈ ಅಂಶಗಳ ಆಧಾರದಲ್ಲಿ ದುಷ್ಕರ್ಮಿ ಗಳು ನೀರು ಅಥವಾ ಆಹಾರದಲ್ಲಿ ವಿಷ ಮಿಶ್ರಣ ಮಾಡಿದ್ದು, ಅದನ್ನು ಸೇವಿಸಿ ಜಿಂಕೆಗಳು ಹಾಗೂ ಕಾಡುಕುರಿಗಳು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಜಮೀನಿಗೆ ಹೋದ ರೈತರು ಜಿಂಕೆ ಮತ್ತು ಕಾಡುಕುರಿಗಳು ಮೃತಪಟ್ಟಿರುವುದನ್ನು ಕಂಡು ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಮಾಹಿತಿ ಪಡೆದು ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿ ಶರಣಬಸಪ್ಪ, ಎಚ್.ಡಿ. ಕೋಟೆ ವಲಯ ಅರಣ್ಯಾಧಿಕಾರಿ ಮಧು ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ವನ್ಯಜೀವಿಗಳ ಮೃತದೇಹಗಳ ಮರ ಣೋತ್ತರ ಪರೀಕ್ಷೆ ನೆರವೇರಿಸಿದ ಪಶು ವೈದ್ಯ ಡಾ.ನಾಗರಾಜು ಅವುಗಳ ಮಾದರಿ ಸಂಗ್ರಹಿಸಿ ವಿಧಿವಿಜಾನ ಪ್ರಯೋ ಗಾಲಯಕ್ಕೆ ಕಳುಹಿಸಿದ್ದಾರೆ. ಜೊತೆಗೆ ಹೆಬ್ಬಳ್ಳ ಜಲಾಶಯದ ನೀರಿನ ಮಾದರಿ ಯನ್ನು ಸಂಗ್ರಹಿಸಲಾಗಿದೆ. ಮರಣೋತ್ತರ ವರದಿ ಬಂದ ಬಳಿಕಷ್ಟೇ ನಿಖರ ಕಾರಣ ಹೊರ ಬೀಳಲಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.