ಮೊತ್ತವನ್ನು ಮ್ಯೂಚುವಲ್ ಫಂಡಿಗೆ ಹಾಕುವ ಅಭ್ಯಾಸ ಖಂಡಿತ ಒಳ್ಳೆಯದೇ. ಅದಕ್ಕಾಗಿಯೇ ಮ್ಯೂಚುವಲ್ ಫಂಡ್ ಗಳು ಎಸ್.ಐ.ಪಿ.ಯನ್ನು ಜಾರಿಗೆ ತಂದಿವೆ. ನಿಮ್ಮ ಬ್ಯಾಂಕಿಗೆ ಸ್ಟಾಂಡಿಂಗ್ ಇನ್‌ಸ್ಟ್ರನ್ ಕೊಟ್ಟರೆ ಸಾಕು. ಪ್ರತಿ ತಿಂಗಳೂ ನಿಗದಿಯಾದ ದಿನದಂದು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಆಯಾ ಮ್ಯೂಚುವಲ್ ಫಂಡಿಗೆ ಜಮೆಯಾಗುತ್ತದೆ. ಮತ್ತು ಅಂದಿನ ನೆಟ್ ಅಸೆಟ್ ವಾಲ್ಯೂ ಆಧಾರದಲ್ಲಿ ನಿಮ್ಮ ಎಸ್.ಐ.ಪಿ. ಮೊತ್ತಕ್ಕೆ ಅನುಗುಣವಾದ ಯುನಿಟ್‌ಗಳ ಧಾರಕರು ನೀವಾಗುತ್ತೀರಿ.
Advertisement
ಆದರೆ ಈ ಎಸ್.ಐ.ಪಿ. ಒಳ್ಳೆಯದೇ? ಅದರಿಂದ ಲಾಭವಿದೆಯೇ? ಈಗ ಈಕ್ವಿಟಿ ಮಾರುಕಟ್ಟೆ ಸತತ ಕುಸಿತಗಳನ್ನು ಕಾಣುತ್ತಿರುವ ಸಂದರ್ಭದಲ್ಲಿ ಎಸ್.ಐ.ಪಿ. ಮುಂದುವರಿಸಬೇಕೇ? ಬೇಡವೇ? ಎಂಬ ಪ್ರಶ್ನೆಗಳು ಕೆಲವು ಹೂಡಿಕೆದಾರರಲ್ಲಿ ಮೂಡುವುದು ಸಹಜ. ಏಕೆಂದರೆ ಇತ್ತೀಚಿನ ತಿಂಗಳುಗಳಲ್ಲಿ ಎಸ್.ಐ.ಪಿ.ಯಿಂದ ಹೂಡಿಕೆದಾರನಿಗೆ ನೆಗೆಟಿವ್ ರಿಸಲ್ಟ್ ದೊರೆಯುತ್ತಿದೆ. ಅಂದರೆ ಅವರು ಹೂಡಿದ ಮೊತ್ತ ಇಳಿಜಾರು ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡುತ್ತ ಬಂದಿದ್ದಾರೆ. ಯಾರೂ ಕೂಡ ನಷ್ಟದ ಹೂಡಿಕೆಯನ್ನು ಬಯಸುವುದಿಲ್ಲ ಅಲ್ಲವೇ? ಹಾಗಾಗಿ ಇಲ್ಲೊಂದು ಚಿಂತನ-ಮಂಥನ ಆಗಬೇಕು.
ಮುನ್ನಡೆದಿವೆ. 2. ಹಾಗಿದ್ದರೆ ನಷ್ಟದ ಮ್ಯೂಚುವಲ್ ಫಂಡ್‌ಗಳಲ್ಲಿರುವ ಮೊತ್ತವನ್ನು ಬೇರೆ ಫಂಡ್/ ಹೂಡಿಕೆಗಳಿಗೆ ವರ್ಗಾಯಿಸಬೇಕೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸಲ್ಲದು. ಆದರೆ ನೀವು ಹೂಡಿಕೆ ಮಾಡಿ ಮೂರು ವರುಷಗಳು ಕಳೆದ ನಂತರವೂ ಆ ಫಂಡ್ ಇನ್ನೂ ಲಾಭದತ್ತ ಮುಖ ಮಾಡಿಲ್ಲ ಎಂದಾದರೆ ಬೇರೆ ಫಂಡಿನತ್ತ ಗಮನ
ಹರಿಸಿ, ನಿಮ್ಮ ಮೊತ್ತವನ್ನು ವರ್ಗಾಯಿಸಿಕೊಳ್ಳಬಹುದು. ಆದರೆ ಈ ಸಂದರ್ಭದಲ್ಲೂ ಜಾಣತನದ ಹೆಜ್ಜೆ ನಿಮ್ಮದಾಗಿರಬೇಕು. ವರ್ಗಾಯಿಸುವ ಫಂಡ್ ಟ್ರಾಕ್ ರೆಕಾರ್ಡು ನೋಡಿ, ಎಚ್ಚರದಿಂದ ಹೆಜ್ಜೆ ಇಡಬೇಕಾಗುತ್ತದೆ.
Related Articles
Advertisement
4. ಲಾಭ ಜಾಸ್ತಿ ಬಂತು. ಮುಂದೇನು ಅಂದಿರಾ? ಆಗ, ಎಸ್.ಐ.ಪಿ. ಮೊತ್ತವನ್ನು ಹೆಚ್ಚಿಸಬಹುದು. ಮಾಸಿಕ ವೇತನ ಪಡೆಯುವವರಿಗೆ ವರ್ಷಕ್ಕೊಮ್ಮೆ ಸಹಜವಾಗಿ ವೇತನ ಏರಿಕೆ ಆಗುತ್ತಿರುತ್ತದೆ. ಆಗ ಹೂಡಿಕೆಗೆಂದು ನಿಗದಿಪಡಿಸಿಟ್ಟ ಮೊತ್ತವನ್ನು ಏರಿಸುತ್ತ ಹೋಗಬಹುದು. ಇದು ಒಳ್ಳೆಯ ನಿರ್ಧಾರ.
5. ಒಂದೇ ಬಾರಿ ದೊಡ್ಡ ಮೊತ್ತವನ್ನು ಅದೇ ಫಂಡಿಗೆ ಹೂಡಬಹುದು. ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿಯಾದ ಮೊತ್ತ ಪ್ರತಿ ತಿಂಗಳೂ ಕಟಾವಣೆ ಯಾಗಿ ಎಸ್.ಐ.ಪಿ,. ಮಾರ್ಗದಲ್ಲಿ ಹೂಡಿಕೆಯಾಗುತ್ತಿದಾಗ್ಯೂ, ನಿಮಗೆ ಬೇರೆ ಮೂಲದಿಂದ ದೊಡ್ಡ ಮೊತ್ತವೊಂದು ಕೈಸೇರಿದರೆ ಅದನ್ನು ಒಂದೇಬಾರಿಗೆ ಅದೇ ಫಂಡಿಗೆ ಹೂಡಿಕೆ ಮಾಡಬಹುದು. ಹೀಗೆ ಮಾಡುವುದರಿಂದ ತಪ್ಪೇನೂ ಇಲ್ಲ. ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ತುಂಬಿಟ್ಟರೆ ಕೆಲವು ಹಾಳಾಗಿ ಹೋಗುವ ಸಾಧ್ಯತೆ ಇದ್ದೇ ಇರುತ್ತದೆ ತಾನೆ? ಹೂಡಿಕೆಯ ವಿಚಾರವೂ ಅಷ್ಟೆ. ನಿಮ್ಮ ಎಲ್ಲ ಮೊತ್ತವನ್ನೂ ಒಂದೇ ಬಗೆಯ ಹೂಡಿಕೆಯಲ್ಲಿ ತೊಡಗಿಸುವುದು ಜಾಣ ನಿರ್ಧಾರವಲ್ಲ. ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಕ್ಷಮತೆಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ಸುರಕ್ಷಿತ ಹೂಡಿಕೆಗಳಲ್ಲಿ ಹಣ ತೊಡಗಿಸುವುದು ಉತ್ತಮ ನಿರ್ಧಾರ. ಈ ನಿಟ್ಟಿನಲ್ಲಿ ಎಸ್.ಐ.ಪಿ. ಒಂದು ಒಳ್ಳೆಯ ಮಾರ್ಗ. ನಿರಂಜನ