Advertisement

ಸ್ಯಾಮ್ ಸಂಗ್‍ನಿಂದ ಎ ಸರಣಿಯ 5 ಫೋನ್‍ಗಳು ಒಟ್ಟಿಗೇ ಬಿಡುಗಡೆ!

07:38 PM Mar 29, 2022 | Team Udayavani |

ಬೆಂಗಳೂರು: ಭಾರತೀಯ ಮೊಬೈಲ್‍ ಫೋನ್‍ ಗ್ರಾಹಕರ ವಿಶ್ವಾಸಾರ್ಹ ಬ್ರಾಂಡ್‍ ಸ್ಯಾಮ್‍ ಸಂಗ್ ತನ್ನ ಎ ಸರಣಿಯಲ್ಲಿ ಐದು ಫೋನ್‍ಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

Advertisement

ಗ್ಯಾಲಕ್ಸಿ ಎ73 5ಜಿ, ಗೆಲಾಕ್ಸಿ ಎ53 5ಜಿ, ಗೆಲಾಕ್ಸಿ ಎ33 5ಜಿ, ಗೆಲಾಕ್ಸಿ ಎ23 ಹಾಗೂ ಎ13 ಐದು ಹೊಸ ಮಾಡೆಲ್‍ಗಳು.
ಎ73 5ಜಿ ಮಾದರಿಯು, 108 ಮೆ.ಪಿ. ಹಿಂಬದಿ ಕ್ಯಾಮರಾ ಹಾಗೂ 32 ಮೆ.ಪಿ. ಮುಂಬದಿ ಕ್ಯಾಮರಾ ಹೊಂದಿದೆ. ಸ್ನಾಪ್‍ಡ್ರಾಗನ್‍ 778ಜಿ ಪ್ರೊಸೆಸರ್, 6.7 ಇಂಚಿನ ಎಫ್‍ಎಚ್‍ಡಿ ಪ್ಲಸ್‍ ಅಮೋಲೆಡ್‍ ಪರದೆ 120 ರಿಫ್ರೆಶ್‍ ರೇಟ್‍ ಹೊಂದಿದೆ.

ಗ್ಯಾಲಕ್ಸಿ ಎ73 5ಜಿ ಫ್ಲಾಗ್‌ಶಿಪ್ ಮಟ್ಟದ 108ಎಂಪಿ ಕ್ಯಾಮರಾ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್(ಒಐಎಸ್), ನೀರು ಮತ್ತು ಧೂಳು ನಿರೋಧಕಕ್ಕೆ ಐಪಿ67 ರೇಟಿಂಗ್ ಉಳ್ಳದ್ದಾಗಿದೆ.

ಗ್ಯಾಲಕ್ಸಿ ಎ73 5ಜಿ 7.6 ಎಂಎಂ ತೆಳು ದೇಹ ಹೊಂದಿದ್ದು, ಡಿಸ್ಪ್ಲೇ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇದೆ. ಇದರ ರ್ಯಾಮ್‍ ಅನ್ನು 16 ಜಿಬಿಯವರೆಗೂ ವಿಸ್ತರಿಸಬಹುದು. 8ಜಿಬಿ+ 128ಜಿಬಿ ಮತ್ತು 8ಜಿಬಿ+256ಜಿಬಿ ಆವೃತ್ತಿಗಳನ್ನು ಹೊಂದಿದೆ.

ಗ್ಯಾಲಕ್ಸಿ ಎ53 5 ಜಿ
64 ಮೆ.ಪಿ. ಹಿಂಬದಿ ಕ್ಯಾಮರಾ ಹಾಗೂ 32 ಸೆಲ್ಫೀ ಕ್ಯಾಮರಾ, ಎಕ್ಸಿನಾಸ್‍ 1280 ಪ್ರೊಸೆಸರ್ ಒಳಗೊಂಡಿದೆ.6.5 ಇಂಚಿನ ಎಫ್‍ಎಚ್‍ ಡಿ ಪ್ಲಸ್‍, 120 ಹರ್ಟ್ಜ್ ರಿಫ್ರೆಶ್‍ ರೇಟ್‍ನ ಅಮೋಲೆಡ್‍ ಪರದೆ ಹೊಂದಿದೆ. ಐಪಿ67 ರೇಟಿಂಗ್ ಸ್ಪಿಲ್, ಸ್ಪ್ಲಾಶ್ ಮತ್ತು ಧೂಳು ನಿರೋಧಕ ಹೊಂದಿದೆ.

Advertisement

ಗ್ಯಾಲಕ್ಸಿ ಎ33 5ಜಿ
ಇದು 6.4 ಇಂಚಿನ ಎಫ್‍ಎಚ್‍ಡಿ ಪ್ಲಸ್‍ ಅಮೋಲೆಡ್‍ ಪರದೆ ಹೊಂದಿದೆ. 90 ಹರ್ಟ್ಜ್ ರಿಫ್ರೆಶ್‍ರೇಟ್‍ ಇದೆ. 48 ಮೆಪಿ ಮುಖ್ಯ ಹಾಗೂ 13 ಮೆ.ಪಿ. ಸೆಲ್ಫೀ ಕ್ಯಾಮರಾ, ಎಕ್ಸಿನಾಸ್‍ 1280 ಪ್ರೊಸೆಸರ್‍ ಹೊಂದಿದೆ. ಇದು ಸಹ ಐಪಿ67 ರೇಟಿಂಗ್ ಹೊಂದಿದ್ದು, ಧೂಳು, ನೀರು ನಿರೋಧಕವಾಗಿದೆ. ಮೇಲಿನ ಮೂರೂ ಫೋನ್‍ ಗಳು 5ಜಿ ಸೌಲಭ್ಯ ಹೊಂದಿದೆ.

ಗ್ಯಾಲಕ್ಸಿ ಎ23 
ಈ ಫೋನು 6.6 ಇಂಚಿನ ಎಫ್‍ ಎಚ್‍ ಡಿ ಪ್ಲಸ್‍ ಎಲ್‍ಸಿಡಿ ಪರದೆ, 90 ಹರ್ಟ್ಜ್ ರಿಫ್ರೆಶ್‍ ರೇಟ್‍ ಹೊಂದಿದೆ. 50 ಮೆ.ಪಿ. ಮುಖ್ಯ ಕ್ಯಾಮರಾ, 8 ಮೆ.ಪಿ. ಸೆಲ್ಫೀ ಕ್ಯಾಮರಾ ಒಳಗೊಂಡಿದೆ. ಸ್ನಾಪ್‍ಡ್ರಾಗನ್‍ 680 4ಜಿ ಪ್ರೊಸೆಸರ್‍ ಹೊಂದಿದೆ.

ಗ್ಯಾಲಕ್ಸಿ ಎ13
6.6 ಇಂಚಿನ ಎಫ್‍ಎಚ್‍ಡಿ ಪ್ಲಸ್‍ ಎಲ್‍ಸಿಡಿ ಪರದೆ, 60 ಹರ್ಟ್ಟ್ ರಿಫ್ರೆಶ್‍ರೇಟ್‍ ಹೊಂದಿದೆ. 50ಮೆ.ಪಿ. ಹಿಂಬದಿ ಕ್ಯಾಮರಾ,+8 ಮೆ.ಪಿ. ಸೆಲ್ಫೀ ಕ್ಯಾಮರಾ, ಎಕ್ಸಿನಾಸ್‍ 850 ಪ್ರೊಸೆಸರ್‍ ಹೊಂದಿದೆ. ಈ ಎಲ್ಲ ಮಾಡೆಲ್‍ಗಳೂ 5000 ಎಂಎಎಚ್‍ ಬ್ಯಾಟರಿ ಇದೆ.

ಎ73 ಹಾಗೂ ಎ53 ಮಾದರಿಗಳಿಗೆ 4 ವರ್ಷಗಳ ವರೆಗೂ ಆಂಡ್ರಾಯ್ಡ್ ಅಪ್‍ಡೇಟ್‍ ಹಾಗೂ 5 ವರ್ಷಗಳ ಸೆಕ್ಯುರಿಟ್‍ ಅಪ್ಡೇಟ್‍ ಹಾಗೂ ಎ33ಗೆ 3 ವರ್ಷ ಓಎಸ್‍ ಅಪ್‍ ಡೇಟ್‍, 4 ವರ್ಷ ಸೆಕ್ಯುರಿಟ್‍ ಅಪ್‍ಡೇಟ್‍ ನೀಡುವುದಾಗಿ ಕಂಪೆನಿ ತಿಳಿಸಿದೆ. ಎ23 ಹಾಗೂ ಎ 13 ಮಾಡೆಲ್‍ಗಳಿಗೆ 2 ವರ್ಷಗಳ ಓಎಸ್‍ ಅಪ್‍ ಡೇಟ್‍ ಹಾಗೂ 4 ವರ್ಷಗಳ ಸೆಕ್ಯುರಿಟ್‍ ಅಪ್ ಡೇಟ್‍ ನೀಡುವುದಾಗಿ ತಿಳಿಸಿದೆ.

ಸ್ಯಾಮ್‌ಸಂಗ್ ಇಂಡಿಯಾದ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಆದಿತ್ಯ ಬಬ್ಬರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಗ್ಯಾಲಕ್ಸಿ ಎ ಸೀರೀಸ್ ಕೈಗೆಟುಕುವ ಬೆಲೆಯಲ್ಲಿ ಫ್ಲಾಗ್‌ಶಿಪ್ ರೀತಿಯ ಫೀಚರ್‌ಗಳನ್ನು ಹೊಂದಿವೆ ಎಂದರು.

ಗ್ಯಾಲಕ್ಸಿ ಎ73 5ಜಿ ಗೆ ಶೀಘ್ರದಲ್ಲೇ ಸ್ಯಾಮ್‌ಸಂಗ್.ಕಾಂ, ಮುಂಚೂಣಿಯ ರೀಟೇಲ್ ಮಳಿಗೆಗಳು ಮತ್ತು ಆಯ್ದ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಿ-ಬುಕ್‌ ಆರಂಭವಾಗಲಿದೆ. ಇದರ ಬೆಲೆಯನ್ನು ಅನಾವರಣಗೊಳಿಸಿಲ್ಲ.

ಗ್ಯಾಲಕ್ಸಿ ಎ53 5ಜಿಯು 6ಜಿಬಿ+128ಜಿಬಿಗೆ, ರೂ.34499 ಹಾಗೂ 8ಜಿಬಿ+128ಜಿಬಿ ವೇರಿಯೆಂಟ್ ಬೆಲೆ ರೂ.35999 ಇದೆ. ಗ್ಯಾಲಕ್ಸಿ ಎ23, 6ಜಿಬಿ+128ಜಿಬಿಗೆ ರೂ.19499 ಹಾಗೂ 8ಜಿಬಿ+128ಜಿಬಿ ಆವೃತ್ತಿ ಬೆಲೆ ರೂ.20999 ಇದೆ.
ಗ್ಯಾಲಕ್ಸಿ ಎ13ರ 5ಜಿಬಿ+64ಜಿಬಿಗೆ ರೂ.14999 ಮತ್ತು 4ಜಿಬಿ+128ಜಿಬಿಗೆ ರೂ.15999 ಹಾಗೂ 6ಜಿಬಿ+64ಜಿಬಿಗೆ ರೂ.17499 ಬೆಲೆ ನಿಗದಿಪಡಿಸಲಾಗಿದೆ.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next