ರಾಮನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ 2007ರಲ್ಲಿ ಸ್ಥಾಪಿಸಿದ್ದ ಗ್ರಾಮಾಂತರ ಪದವಿ ಪೂರ್ವ ಕಾಲೇಜುಗಳು ಒಂದೊಂದಾಗಿ ಬೀಗ ಹಾಕುತ್ತಿವೆ. ಜಿಲ್ಲೆಯಲ್ಲಿ ಕಳೆದ 2 ಶೈಕ್ಷಣಿಕ ವರ್ಷಗಳ ಅವಧಿಯ ಲ್ಲಿ 5 ಪಿಯು ಕಾಲೇಜುಗಳು ಬಾಗಿಲು ಮುಚ್ಚಿವೆ.
ಹೌದು.., ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ದಾಖ ಲಾಗಿಲ್ಲ ಎಂಬ ಕಾರಣದಿಂದ ರಾಮನಗರ ತಾಲೂ ಕಿನ ಅಣ್ಣಹಳ್ಳಿ, ಕೆ.ಬನ್ನಿಕುಪ್ಪೆ ಹಾಗೂ ಕೂನಗಲ್ ಕಾಲೇಜುಗಳು ಬಂದ್ ಆಗಿವೆ. ಕಳೆದ ಸಾಲಿನಲ್ಲಿ ರಾಮನಗರ ತಾಲೂಕಿನ ಯರೇಹಳ್ಳಿ ಮತ್ತು ಮಾಗಡಿ ತಾಲೂಕಿನ ಮಂಚನಬೆಲೆ ಕಾಲೇಜುಗಳು ಬಂದ್ ಆಗಿತ್ತು. ಇದೀಗ 5 ಕಾಲೇಜುಗಳು ಬಂದ್ ಆಗಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮತ್ತಷ್ಟು ಗ್ರಾಮಾಂತರ ಕಾಲೇಜುಗಳು ಬಂದ್ ಆಗಲಿವೆ ಎಂಬ ಆತಂಕ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ: ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ ಗ್ರಾಮೀಣ ಭಾಗದ ಕಾಲೇಜುಗಳು ಬಂದ್ ಆಗುವುದಕ್ಕೆ ವಿದ್ಯಾ ರ್ಥಿಗಳು ದಾಖಲಾಗದಿರುವುದೇ ಮುಖ್ಯ ಕಾರಣ. ಕಡಿಮೆ ಪ್ರಮಾಣದ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಬೇರೆ ಪ್ರದೇಶದ ಕಾಲೇಜುಗಳಿಗೆ ದಾಖಲಾಗುತ್ತಿ ರುವು ದರಿಂದ ಬಂದ್ ಮಾಡುವ ಅನಿವಾರ್ಯತೆ ಎದು ರಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡು ತ್ತಿದ್ದಾರೆ. ಕಾಲೇಜು ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಕಷ್ಟು ಪ್ರೌಢಶಾಲೆಗಳು ಇದ್ದಾಗ್ಯೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗುವ ವಿದ್ಯಾರ್ಥಿ ಗಳು ಗ್ರಾಮೀಣ ಕಾಲೇಜಿಗೆ ಸೇರಲು ಆಸಕ್ತಿ ತೋರು ತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ನಗರ ಪ್ರದೇಶದ ಕಾಲೇ ಜುಗಳಿಗೆ ದಾಖಲಾಗುತ್ತಿದ್ದಾರೆ ಎಂದು ಅಧಿಕಾರಿಗಳು ಕಾಲೇಜು ಬಂದ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕಾಲೇಜು ಗಳಿಗೆ ವಿದ್ಯಾರ್ಥಿ ಗಳನ್ನು ದಾಖಲು ಮಾಡುವಂತೆ ಹಲವಾರು ಬಾರಿ ಆಂದೋಲನ ನಡೆಸಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ. ಕಡಿಮೆ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ಇದ್ದಾರೆ ಎಂಬ ಕಾರಣಕ್ಕೆ ಪೋಷಕರು ಸೇರ್ಪಡೆ ಮಾಡಲು ಮುಂದಾಗುತ್ತಿಲ್ಲ ಎಂದು ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಸೌಕರ್ಯವಿದ್ದರೂ ಬಂದ್; 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್. ಡಿ.ರೇವಣ್ಣ ಇದ್ದರು. ಈ ಸಮಯದಲ್ಲಿ ರಾಮನಗರಕ್ಕೆ ಅನುದಾನದ ಹೊಳೆಯೇ ಹರಿದು ಬಂದಿತು. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಪಿಯು ಕಾಲೇಜು ಗಳನ್ನು ನಿರ್ಮಿಸಲಾಗಿತ್ತು. ಹೀಗೆ ಮಂಜೂರುಗೊಂಡ ಪಿಯು ಕಾಲೇಜುಗಳಿಗೆ ಕಟ್ಟಡ ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಲ್ಪಿಸಲಾ ಗಿದ್ದರೂ ಕಾಲೇಜುಗಳು ಬಂದ್ ಆಗಿರುವುದು ವಿಪರ್ಯಾಸವೇ ಸರಿ.
ಕಲಾವಿಭಾಗಕ್ಕೆ ಸೇರಲು ಹಿಂದೇಟು: ಗ್ರಾಮೀಣ ಭಾಗದಲ್ಲಿರುವ ಬಹುತೇಕ ಕಾಲೇಜುಗಳು ಕೇವಲ ಕಲಾವಿಭಾಗವನ್ನು ಮಾತ್ರ ಹೊಂದಿವೆ. ಯರಹಳ್ಳಿ ಕಾಲೇಜಿನಲ್ಲಿ ಮಾತ್ರ ವಾಣಿಜ್ಯ ವಿಭಾಗವನ್ನೂ ಹೊಂದಿತ್ತು. ಕಲಾವಿಭಾಗಕ್ಕೆ ದಾಖಲಾಗಲು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದು, ಹೆಚ್ಚಾಗಿ ಖಾಸಗಿ ಕಾಲೇಜುಗಳಲ್ಲಿ ವಿಜ್ಞಾನ ಅಥವಾ ವಾಣಿಜ್ಯ ವಿಭಾಗಕ್ಕೆ ದಾಖಲಾಗಲು ಹೆಚ್ಚು ಆಸಕ್ತಿ ತೋರುತ್ತಿರುವ ಕಾರಣ ಗ್ರಾಮೀಣ ಕಾಲೇಜುಗಳಿಗೆ ದಾಖಲಾತಿ ಪ್ರಮಾಣ ಕಡಿಮೆ ಯಾಗುತ್ತಿದೆ. ಇನ್ನು ಯರೇಹಳ್ಳಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಉಪನ್ಯಾಸಕರು ಇಲ್ಲವಾಗಿದ್ದು, ವಿದ್ಯಾರ್ಥಿಗಳು ದಾಖಲಾಗಲು ಹಿಂದೇಟು ಹಾಕು ವಂತಾಯಿತು. ಅಲ್ಲದೆ ಕೆಲ ಕಾಲೇಜುಗಳಲ್ಲಿ ಉಪ ನ್ಯಾಸಕರ ಕೊರತೆಯಿಂದಾಗಿ ಮಕ್ಕಳನ್ನು ದಾಖಲು ಮಾಡಲು ಪೋಷಕರು ಮುಂದೆ ಬರುತ್ತಿಲ್ಲ ಎಂದು ಕೆಲ ಉಪನ್ಯಾಸಕರು ಮಾಹಿತಿ ನೀಡುತ್ತಾರೆ.
ಉಪನ್ಯಾಸಕರ ಪಾಡೇನು !:
ಜಿಲ್ಲೆಯಲ್ಲಿ ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ಬಂದ್ ಆಗಿರುವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು ಇದೀಗ ಅಂತಂತ್ರರಾಗಿದ್ದಾರೆ. ಇವರು ಕಥೆ ಏನು ಎಂಬುದು ಇದೀಗ ಮುಂದಾಗಿರುವ ಪ್ರಶ್ನೆ. ಈಗಾಗಲೇ ಬೇರೆ ಕಾಲೇಜುಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಉಪ ನ್ಯಾಸಕರನ್ನು ನಿಯೋಜನೆ ಮಾಡಲಾಗಿದೆ.
ಬಂದ್ ಆಗಿರುವ ಕಾಲೇಜಿನ ಉಪ ನ್ಯಾಸಕರನ್ನು ಎಲ್ಲಿಗೆ ನಿಯೋಜಿಸುತ್ತಾರೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಒಟ್ಟಾರೆ ಗ್ರಾಮೀಣ ಭಾಗದ ಪಿಯು ಕಾಲೇಜಿನ ಬಗ್ಗೆ ಉಪೇಕ್ಷೆ ಮಾಡು ತ್ತಿರುವ ಪರಿಣಾಮ ಗ್ರಾಮೀಣ ಕಾಲೇಜುಗಳು ಬಾಗಿಲು ಮುಚ್ಚುತ್ತಿವೆ. ವಿಪರ್ಯಾಸವೆಂದರೆ ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಖಾಸಗಿ ಕಾಲೇಜುಗಳತ್ತ ಮುಖಮಾಡು ಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ.
ಶೂನ್ಯ ದಾಖಲಾತಿ ಪಡೆದಿರುವ ಕಾಲೇಜುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡ ಲಾಗಿದ್ದು, ಮುಂದಿನ ಸಾಲಿನಲ್ಲಿ ವಿದ್ಯಾರ್ಥಿಗಳು ದಾಖಲಾದರೆ ಮತ್ತೆ ಆರಂಭಿಸ ಲಾಗುವುದು. ಈ ಕಾಲೇಜು ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪನ್ಯಾಸಕರ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ನಡೆಯುತ್ತಿದ್ದು, ಕೌನ್ಸಿಲಿಂಗ್ ಮುಗಿದು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಕಾಲೇಜುಗಳ ಉಪನ್ಯಾಸಕರಿಗೆ ವರ್ಗಾವಣೆ ಸಿಗದೇ ಹೋದಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ಓಓಡಿ ಮೇರೆಗೆ ನಿಯೋಜಿಸಲಾಗುವುದು.
-ಗೋವಿಂದರಾಜು, ಉಪ ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮನಗರ
–ಸು.ನಾ.ನಂದಕುಮಾರ್