Advertisement

Chhattisgarh; 5 ನಕ್ಸಲರ ಬಂಧನ: ಭಾರೀ ಸ್ಫೋಟಕ ವಶ

10:31 PM Jul 07, 2024 | Team Udayavani |

ರಾಯಪುರ್‌: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಗಳು ಜಂಟಿ ಕಾರ್ಯಾಚರಣೆ ನಡೆಸಿ ಭಾನು ವಾರ 5 ನಕ್ಸಲರನ್ನು ಬಂಧಿಸಿವೆ. ಜತೆಗೆ, ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿ ವೆ. ನಕ್ಸಲರ ಬಳಿ ಇದ್ದ 2 ಬ್ಯಾರೆಲ್‌ ಗ್ರೆನೇಡ್‌ ಲಾಂಚರ್‌ ಶೆಲ್‌, 1 ಟಿಫಿನ್‌ ಬಾಂಬ್‌, 9 ಡಿಟೊನೆಟರ್‌, 7 ಜಿಲೆಟಿನ್‌ ರಾಡ್‌, ಸ್ಫೋಟಕ ಪೌಡರ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಜಗರ್‌ಗುಂಡಾ ಪ್ರದೇಶದಲ್ಲಿ ನಕ್ಸಲರು ವೇಷ ಮರೆಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಕೂಡಲೇ ಅವರನ್ನು ಭದ್ರತಾ ಪಡೆಗಳು ಬೆನ್ನಟ್ಟಿ ಬಂಧಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next