Advertisement

Uttar Kashi: ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಬೇಕು ಇನ್ನೂ 5 ದಿನ!

10:51 PM Nov 19, 2023 | Team Udayavani |

ಉತ್ತರಕಾಶಿ: ಉತ್ತರಾಖಂಡ ಸಿಲ್ಕ್ಯಾರಾದಲ್ಲಿ ಕುಸಿದಿರುವ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಕಾರ್ಮಿಕರನ್ನು ಪಾರು ಮಾಡಲು ಇನ್ನೂ ನಾಲ್ಕರಿಂದ ಐದು ದಿನಗಳು ಬೇಕಾಗುವ ಸಾಧ್ಯತೆಗಳಿವೆ. ಭಾನುವಾರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, “ಅಮೆರಿಕದಿಂದ ತರಿಸಲಾಗಿರುವ ಆಗರ್‌ ಯಂತ್ರ ದುರಸ್ತಿಯಾದಲ್ಲಿ ಎರಡರಿಂದ ಎರಡೂವರೆ ದಿನಗಳ ಒಳಗಾಗಿ ಕಾರ್ಮಿಕರನ್ನು ಪಾರು ಮಾಡಬಹುದು. ನಮ್ಮ ಬಳಿ ಈಗ ರಕ್ಷಣಾ ಕಾರ್ಯ ನಡೆಸಲು ಒಟ್ಟು 6 ಆಯ್ಕೆಗಳಿವೆ. ಪ್ರತಿಯೊಂದನ್ನೂ ಪರಿಶೀಲಿಸಲಾಗುತ್ತಿದೆ’ ಎಂದಿದ್ದಾರೆ.

Advertisement

ಇದೇ ವೇಳೆ, ಘಟನಾ ಸ್ಥಳದಲ್ಲಿ ಮಾತನಾಡಿದ ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ರಂಜಿತ್‌ ಸಿನ್ಹಾ, ಆಗರ್‌ ಮಷಿನ್‌ಗಾಗಿ 900 ಮಿ.ಮೀ. ಡಯಾಮೀಟರ್‌ ಇರುವ ಬೃಹತ್‌ ಪೈಪ್‌ಗ್ಳನ್ನು ಕುಸಿದು ಬಿದ್ದ ಟನೆಲ್‌ಗೆ ಅಳವಡಿಸಲಾಗಿದೆ ಎಂದರು.

ಮತ್ತೂಂದೆಡೆ, ಕೇಂದ್ರ ಸರ್ಕಾರದ ವತಿಯಿಂದ ಕಾರ್ಮಿಕರನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕಾಗಿ ಮಲ್ಟಿ ವಿಟಮಿನ್‌ಗಳು, ಒಣ ಹಣ್ಣುಗಳು, ಖನ್ನತೆ ನಿವಾರಿಸಲು ಬೇಕಾಗಿರುವ ಔಷಧಗಳನ್ನು ಒಳಗೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next