Advertisement

ನೀರಿನ ವ್ಯವಸ್ಥೆ ಸ್ವತ್ಛತೆಗೆ 5 ಲಕ್ಷ ರೂ. ಬಿಡುಗಡೆ

01:15 PM Dec 10, 2017 | Team Udayavani |

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ 98 ಮಂದಿ ವಿಚಾರಣಾಧೀನ ಕೈದಿಗಳು ಚರ್ಮರೋಗದಿಂದ ಬಳಲುತ್ತಿರುವ ಬಗ್ಗೆ ಶನಿವಾರ ನಡೆದ ಆರೋಗ್ಯ ತಪಾಸಣಾ ಶಿಬಿರದ ಸಂದರ್ಭ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರಾಗೃಹದ ಕುಡಿಯುವ ನೀರಿನ ಟ್ಯಾಂಕ್‌ ಸರಿಪಡಿಸಿ ಶುದ್ಧ
ನೀರು ಪೂರೈಸಲು 5 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.

Advertisement

 ಕರ್ನಾಟಕ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಕೆಎಂಸಿ ಆಸ್ಪತ್ರೆ ಹಾಗೂ ಎ.ಜೆ. ದಂತ ವೈದ್ಯಕೀಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ವಿಚಾರಣಾಧೀನ ಕೈದಿಗಳ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಂಡಿತ್ತು.

ಆರೋಗ್ಯ ಶಿಬಿರದ ವೇಳೆ ಕಾರಾಗೃಹಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಗರಿಷ್ಠ ಸಂಖ್ಯೆಯ
ಕೈದಿಗಳು ಚರ್ಮರೋಗದಿಂದ ಬಳಲುತ್ತಿರುವುದನ್ನು ಗಮನಿಸಿ ಅಚ್ಚರಿಗೊಂಡು ಜೈಲು ಅಧಿಕಾರಿಗಳ ಜತೆ
ಬಳಸುವ ನೀರಿನ ಬಗ್ಗೆ ವಿಚಾರಿಸಿದರು. 

ಮಹಾನಗರಪಾಲಿಕೆಯ ನೀರನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದರು. ನೀರಿನ ಪೈಪ್‌ ಹಾಗೂ ಟ್ಯಾಂಕ್‌ಗಳಲ್ಲಿ ಕೊಳಚೆ ತುಂಬಿರುವ ಸಾಧ್ಯತೆಯನ್ನು ಮನಗಂಡು ಅದನ್ನು ಶುಚಿಗೊಳಿಸಲು ಸ್ಥಳದಲ್ಲೇ 5 ಲಕ್ಷ ರೂ. ಬಿಡುಗಡೆಗೊಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಶುದ್ಧ ನೀರನ್ನು ಪೂರೈಸಲು ಸೂಚಿಸಿದರು.

ಶಿಬಿರವನ್ನು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಡಿಸಿಪಿ ಹನುಮಂತರಾಯ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next