ಇರಾನ್ : ಇರಾನ್‌ನ ನೈಋತ್ಯ ನಗರವಾದ ಇಜಿಹ್‌ನ ಬೀಚ್ ಮಾರ್ಕೆಟ್‌ನಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡವರಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರೂ ಸೇರಿದ್ದಾರೆ ಎನ್ನಲಾಗಿದೆ ಎಂದು ಇಲ್ಲಿನ ಸುದ್ದಿ ಸಂಸ್ಥೆ ಹೇಳಿದೆ.
ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಯಾವ ಉದ್ದೇಶಕ್ಕಾಗಿ ದಾಳಿ ನಡೆಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಗುಂಡಿನ ದಾಳಿಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗಳು ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಖುಜೆಸ್ತಾನ್ ಪ್ರಾಂತ್ಯದ ಉಪ ಗವರ್ನರ್ ವಲಿಯುಲ್ಲಾ ಹಯಾತಿ ಹೇಳಿದ್ದಾರೆ.
ಇದನ್ನೂ ಓದಿ : ಭಾರತ-ನ್ಯೂಜಿಲ್ಯಾಂಡ್ ಟಿ20 ಟ್ರೋಫಿ ಅನಾವರಣ; ಮುಂದಿನ ವಿಶ್ವಕಪ್‌ಗೆ ಕಾರ್ಯಯೋಜನೆ: ಪಾಂಡ್ಯ