Advertisement

5 ಇಂಚು ಉದ್ದದ ಹೆಬ್ಬೆರಳು ನೋಡಿ ಲಕ್ಷ ಫಾಲೋವರ್ಸ್ ಬಂದ್ರು ..! ವೀಡಿಯೋ ವೈರಲ್

04:08 PM Apr 08, 2020 | Suhan S |

ಟಿಕ್ ಟಾಕ್ ನಲ್ಲಿ ಪ್ರಸಿದ್ಧಿಗಳಿಸೋಕೆ ಜನ ಏನೆಲ್ಲಾ ಮಾಡ್ತಾರೆ ಅನ್ನುವುದು ನಿಮಗೆಲ್ಲ ಗೊತ್ತೇ ಇದೆ. ಮನೋರಂಜನೆಯನ್ನು ನೀಡುವ ಟಿಕ್ ಟಾಕ್ ಪ್ರಸುತ್ತ ಟ್ರೆಂಡಿಂಗ್ ಆ್ಯಪ್ ಗಳಲ್ಲಿ ಒಂದು.

Advertisement

ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಟಿಕ್ ಟಾಕ್  ವೀಡಿಯೋ ಎಷ್ಟು ವೈರಲ್ ಆಗುತ್ತದೆ ಅನ್ನುವುದ್ದಕ್ಕೆ ಈ ಹುಡುಗನೇ ಸಾಕ್ಷಿ. ಜಾಕೋಬ್ ಪಿನಾ ಎನ್ನುವ ಹುಡುಗನ ಬಲ ಕೈಯ ಹೆಬ್ಬೆರಳು 5 ಇಂಚು ಉದ್ದವಾಗಿ ಬೆಳೆದಿದೆ. ಇದನ್ನು ಆತ ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾನೆ. ಈ ವೀಡಿಯೋ ಈಗ ಟಿಕ್ ಟಾಕ್ ನಲ್ಲಿ ವೈರಲ್ ಆಗಿದೆ.

ಜಾಕೋಬ್ ತನ್ನ ಹೆಬ್ಬೆರಳಿನ ವೀಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್ ಜನ ಅದನ್ನು ಲೈಕ್ ಮಾಡಿದ್ದಾರೆ. ಜೊತೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಈಗ ಜಾಕೋಬ್ ಅನ್ನು ಫಾಲೋ ಮಾಡಿದ್ದಾರೆ. 37 ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಗಳು ಬಂದಿವೆ ಇದೆಲ್ಲವೂ ಜಾಕೋಬ್ ತನ್ನ  ಐದು ಇಂಚಿನ ಉದ್ದವಿರುವ ಹೆಬ್ಬೆರಳಿನ ವೀಡಿಯೋ ಹಾಕಿದ್ದರಿಂದ ಸಾಧ್ಯವಾಯಿತು ಅನ್ನುವುದು ಆಶ್ಚರ್ಯ.!

 

Advertisement

Udayavani is now on Telegram. Click here to join our channel and stay updated with the latest news.

Next