Advertisement

300ಕ್ಕೂ ಅಧಿಕ ಬ್ಯಾಟರಿ ಚಾರ್ಜರ್‌ ಕಳವು: ಮೊಬೈಲ್‌ ಫೋನ್‌ ಕಂಪೆನಿಯ 5 ನೌಕರರು ಅರೆಸ್ಟ್‌

09:50 AM May 10, 2019 | Sathish malya |

ನೋಯ್ಡಾ, ಉತ್ತರ ಪ್ರದೇಶ : ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಉದ್ದೇಶದಲ್ಲಿ ಎರಡು ಲಕ್ಷ ರೂ. ಮೌಲ್ಯದ 300ಕ್ಕೂ ಅಧಿಕ ಬ್ಯಾಟರಿ ಚಾರ್ಜರ್‌ ಗಳನ್ನು ಕದ್ದ ಆರೋಪದ ಮೇಲೆ ಇಲ್ಲಿನ ಮೊಬೈಲ್‌ ಫೋನ್‌ ಉತ್ಪಾದನಾ ಕಂಪೆನಿಯೊಂದರ ಐದು ನೌಕರರನ್ನು ಪೊಲೀಸರು ಗುರುವಾರ ಬಂಧಿಸಿದರು.

Advertisement

ಕಂಪೆನಿಯ ಒಳಗಿನ ಕೆಲವು ನೌಕರರು ಹೊರಗೆ ಮಾರುವ ಉದ್ದೇಶದಿಂದ ಬ್ಯಾಟರಿ ಚಾರ್ಜರ್‌ ಗಳನ್ನು ಕದಿಯುತ್ತಿದ್ದಾರೆಂಬ ಶಂಕೆಯಲ್ಲಿ ಸ್ಯಾಮ್‌ಸಂಗ್‌ ಅಧಿಕಾರಿ ನಿನ್ನೆ ಬುಧವಾರ ಪೊಲೀಸರಿಗೆ ದೂರು ನೀಡಿದ್ದರು.

ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಂಪೆನಿಯ ನೌಕರರ ಕೆಲಸದ ಅವಧಿ ಮುಗಿದಾಗ ತಪಾಸಣೆ ನಡೆಸಿದರು. ಆಗ ಐವರು ನೌಕರರು ತಮ್ಮಲ್ಲಿ ಅಡಗಿಸಿಟ್ಟುಕೊಂಡಿದ್ದ 320 ಬ್ಯಾಟರಿ ಚಾರ್ಜರ್‌ ಗಳು ಪತ್ತೆಯಾಗಿ ಅವನ್ನು ಪೊಲೀಸರು ವಶಪಡಿಸಿಕೊಂಡರು. ಇವುಗಳ ಮಾರುಕಟ್ಟೆ ಮೌಲ್ಯ ಅಂದಾಜು ಎರಡು ಲಕ್ಷ ರೂ. ಎಂದು ನೋಯ್ಡಾ ಫೇಸ್‌ 2 ಠಾಣಾಧಿಕಾರಿ ಫ‌ರ್ಮೂದ್‌ ಅಲಿ ಪುಂದೀರ್‌ ಹೇಳಿದರು.

ಬಂಧಿತ ನೌಕರರನ್ನು ಅಮಿತ್‌ ಕುಮಾರ್‌, ಚಂದನ್‌, ನಿರಂಜನ್‌, ಸುನೀಲ್‌ ಯಾದವ್‌ ಮತ್ತು ಮಾರುತಿ ಎಂದು ಗುರುತಿಸಲಾಗಿದೆ. ಇವರು ಈ ಹಿಂದೆಯೂ ಕಂಪೆನಿಯಲ್ಲಿ ಇದೇ ರೀತಿ ಕಳವು ನಡೆಸಿದ್ದರೆಂಬುದು ಈಗ ತನಿಖೆಯಲ್ಲಿ ಬಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next