Advertisement
ಪ್ರಸ್ತುತ ನದಿಯ ಅಲ್ಲಲ್ಲಿ ಇರುವ ಹಳ್ಳಗಳಿಂದ ನೀರನ್ನು ಪಂಪ್‌ಗ್ಳ ಮೂಲಕ ಬಜೆ ಅಣೆಕಟ್ಟಿಗೆ ಹಾಯಿಸಿ ಅಲ್ಲಿಂದ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಪುತ್ತಿಗೆ ಸೇತುವೆ, ಪುತ್ತಿಗೆ ಮಠ ಗುಂಡಿ, ಸಾೖಬ್ರಗುಂಡಿಗಳಿಂದ ಒಟ್ಟು 6 ಪಂಪ್‌ಗ್ಳಿಂದ ನೀರು ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಕಳೆದ ರವಿವಾರ ನೀರು ಹರಿಯಲು ಅಡ್ಡವಾಗಿದ್ದ ಬಂಡೆಯೊಂದನ್ನು ತೆರವುಗೊಳಿಸಲಾಗಿದೆ. ಇದರಿಂದ ನೀರಿನ ಹರಿವು ಸರಾಗವಾಗಿದೆ.
ಒಂದು ವೇಳೆ ಮಳೆ 5 ದಿನಗಳ ಅನಂತರವೂ ಬರದಿದ್ದರೆ ಸ್ವರ್ಣಾ ನದಿಯ ಭಂಡಾರಿಬೆಟ್ಟು ಪ್ರದೇಶದಲ್ಲಿರುವ ಹಳ್ಳದಿಂದ ನೀರು ಪಂಪಿಂಗ್ ಮಾಡುವ ಬಗ್ಗೆ ಹಾಗೂ ಮತ್ತೂಮ್ಮೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶ್ರಮದಾನದ ಮೂಲಕ ನೀರು ಹರಿಯುವಿಕೆಗೆ ಇರಬಹುದಾದ ತಡೆಯನ್ನು ತೆಗೆಯುವ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಭಂಡಾರಿಬೆಟ್ಟು ಹಳ್ಳದಲ್ಲಿ ಮತ್ತೆ 5 ದಿನಗಳ ನೀರು ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಶಾಸಕ ರಘುಪತಿ ಭಟ್ ಬುಧವಾರ ಕೂಡ ಪಂಪಿಂಗ್ ಪ್ರದೇಶಕ್ಕೆ ಭೇಟಿ ನೀಡಿ ಅವಲೋಕಿಸಿದರು. “5 ದಿನಗಳ ವರೆಗೆ ನೀರು ದೊರೆಯಬಹುದು’ ಎಂದು ಶಾಸಕರು ತಿಳಿಸಿದರು.
Related Articles
Advertisement