Advertisement

ಆಧಾರ್‌ನಿಂದ‌ 5 ಕೋಟಿ ನಕಲಿ ಖಾತೆ ಬೆಳಕಿಗೆ

07:25 AM Nov 05, 2017 | Harsha Rao |

ನವದೆಹಲಿ: ಆಧಾರ್‌ನಿಂದ 5 ಕೋಟಿ “ಅನಾಮಧೇಯ ಖಾತೆಗಳು’ ಬೆಳಕಿಗೆ ಬಂದಿವೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶನಿವಾರ ತಿಳಿಸಿದ್ದಾರೆ. ನಮ್ಮ ಸರ್ಕಾರವು ಆಧಾರ್‌ ಅನ್ನು ಕಡ್ಡಾಯಗೊಳಿಸಿದ ಬಳಿಕ 3.5 ಕೋಟಿ ನಕಲಿ ಎಲ್‌ಪಿಜಿ ಸಂಪರ್ಕಗಳು ಮತ್ತು 1.6 ಕೋಟಿ ನಕಲಿ ಪಡಿತರ ಚೀಟಿಗಳು ಪತ್ತೆಯಾಗಿವೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಆಧಾರ್‌ ಕಾರ್ಡ್‌ನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಬೆನ್ನಲ್ಲೇ ಸಚಿವ ಗೋಯಲ್‌ ಈ ಟ್ವೀಟ್‌ ಮಾಡಿರುವುದು ಮಹತ್ವ ಪಡೆದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next