Advertisement

CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ

10:04 PM Jul 02, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹಾಲಿನ ಉತ್ಪಾದನೆ ದಿನಕ್ಕೆ 1 ಕೋಟಿ ಲೀಟರ್‌ ಗಡಿ ದಾಟಿದ್ದು, ಇದರಿಂದ ರೈತರಿಗೆ ನೀಡುವ ಪ್ರೋತ್ಸಾಹಧನ ನಿತ್ಯ 5 ಕೋಟಿ ರೂ. ಆಗಿದೆ. ವಾರ್ಷಿಕ 1,800 ಕೋಟಿ ರೂ. ನೀಡುವ ಮೂಲಕ ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ಆದರೆ, ಹೆಚ್ಚುವರಿ ಹಾಲು ನೀಡುತ್ತಿರುವ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇದ್ದಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಒಂದು ಕೋಟಿ ಲೀಟರ್‌ ಹಾಲಿನ ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್‌ನಲ್ಲಿ ದಿನಕ್ಕೆ 90 ಲಕ್ಷ ಲೀಟರ್‌ ಇತ್ತು. ಈಗ ಒಂದು ಕೋಟಿ ಲೀಟರ್‌ ತಲುಪಿದೆ. ಹಾಲು ಉತ್ಪಾದನೆ ಹೆಚ್ಚಾದರೆ ಹೆಚ್ಚು ಆದಾಯ ಬರಲಿದೆ. ಒಂದು ಕೋಟಿ ಲೀಟರ್‌ ಉತ್ಪಾದನೆಯಾದರೆ ಒಂದು ದಿನಕ್ಕೆ 5 ಕೋಟಿ ಪ್ರೋತ್ಸಾಹಧನವನ್ನು ಸರ್ಕಾರ ಕೊಡುತ್ತದೆ. ಒಂದು ತಿಂಗಳಿಗೆ 150 ಕೋಟಿ, ವರ್ಷಕ್ಕೆ 1,800 ಕೋಟಿ ರೂ.ಗಳನ್ನು ನೀಡಿ ರೈತರಿಗೆ ಸಹಾಯ ಮಾಡಲಾಗುತ್ತಿದೆ. ಆದರೆ, ಪ್ರತಿಪಕ್ಷಗಳು ಇದನ್ನು ಅರ್ಥಮಾಡಿಕೊಳ್ಳದೆ ಹಾಲಿನ ಬೆಲೆ ಜಾಸ್ತಿ ಮಾಡಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಬಹುಶಃ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಂತಿಲ್ಲ ಎಂದು ಸಿಎಂ ದೂರಿದರು.

ಹೆಚ್ಚುವರಿ ಹಾಲಿನ ಸಮರ್ಥನೆ:
ಹಾಗೊಂದು ವೇಳೆ ಹಾಲಿನ ಬೆಲೆ ಹೆಚ್ಚಾದರೂ ಖರೀದಿಸುವವರಿಗೆ ಅದು ಭಾರವಾಗುತ್ತದೆಯೇ ಹೊರತು, ರೈತರಿಗೆ ಹೊರೆ ಆಗುವುದಿಲ್ಲ. ಬದಲಿಗೆ ಸಹಾಯವಾಗುತ್ತದೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಸುಮಾರು 16 ಸಾವಿರ ಸೊಸೈಟಿಗಳಿದ್ದು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು-ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 50 ಮಿಲಿ ಲೀಟರ್‌ ಹಾಲು ಹೆಚ್ಚು ಮಾಡಲಾಗಿದೆ. ಇಷ್ಟೂ ಹಾಲನ್ನು ಮಾರಾಟ ಮಾಡಬೇಕಿದೆ. ನಾವು ರೈತರಿಗೆ ಹಾಗೂ ಸೊಸೈಟಿಗಳಿಗೆ ಹಾಲು ಬೇಡ ಎನ್ನಲಾಗುವುದಿಲ್ಲ. ರೈತರಿಗೆ ಸಹಾಯ ಮಾಡಲು ನಂದಿನಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಪ್ರಮಾಣಕ್ಕೆ 2 ರೂ. ಹೆಚ್ಚಿಸಲಾಗಿದೆ ಎಂದು ಪುನರುತ್ಛರಿಸಿದರು.

2 ರೂ.ಇದ್ದ ಪ್ರೋತ್ಸಾಹಧನವನ್ನು 5 ರೂ. ಮಾಡಿದವನು ನಾನು. ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಈ ಬಗ್ಗೆ ತಿಳಿಯದೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದ ಸಿಎಂ, ಕೆಎಂಎಫ್ನಿಂದ ಪ್ರತಿ ದಿನ 1 ಕೋಟಿ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಇತಿಹಾಸದಲ್ಲಿಯೇ ಇದೊಂದು ಮಹತ್ವದ ಮೈಲಿಗಲ್ಲು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎನ್‌. ರಾಜಣ್ಣ, ಜಮೀರ್‌ ಅಹಮದ್‌ಖಾನ್‌, ಎನ್‌. ಚಲುವರಾಯಸ್ವಾಮಿ, ವೆಂಕಟೇಶ್‌, ಬೈರತಿ ಸುರೇಶ್‌, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್‌ ಮತ್ತಿತರರು ಇದ್ದರು.

Advertisement

ಕೆಎಂಎಫ್ 1 ಕೋಟಿ ಲೀಟರ್‌ ಹಾಲಿನ ಸಂಭ್ರಮಾಚರಣೆ ಅಂಗವಾಗಿ ಸಿದ್ದರಾಮಯ್ಯ ಹಾಸು-ಕುರು, ರೈತನ್ನು ಸಾಂಕೇತಿಕವಾಗಿ ಸನ್ಮಾನಿಸಿದರು. ಕೆ.ಎನ್‌.ರಾಜಣ್ಣ, ಜಮೀರ್‌ ಅಹಮದ್‌, ಚಲುವರಾಯಸ್ವಾಮಿ, ಕೆ.ವೆಂಕಟೇಶ್‌, ಭೀಮಾನಾಯಕ್‌,

Advertisement

Udayavani is now on Telegram. Click here to join our channel and stay updated with the latest news.

Next